Home » Vande Bharat Sleeper : ದೇಶದ ಮೊದಲ ‘ವಂದೇ ಭಾರತ್ ಸ್ಲೀಪರ್’ ಸೇವೆ ಆರಂಭ – ರೈಲ್ವೆ ಸಚಿವರಿಂದ ದಿನಾಂಕ, ಮಾರ್ಗ ಘೋಷಣೆ

Vande Bharat Sleeper : ದೇಶದ ಮೊದಲ ‘ವಂದೇ ಭಾರತ್ ಸ್ಲೀಪರ್’ ಸೇವೆ ಆರಂಭ – ರೈಲ್ವೆ ಸಚಿವರಿಂದ ದಿನಾಂಕ, ಮಾರ್ಗ ಘೋಷಣೆ

0 comments

Vande Bharat Sleeper : ವಂದೇ ಭಾರತ್ ರೈಲುಗಳು ಭಾರತದ ಅಭಿವೃದ್ಧಿಯನ್ನು, ತಂತ್ರಜ್ಞಾನದ ಮುಂದುವರಿಕೆಯನ್ನು ಸೂಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದಾಗಲೇ ದೇಶಾದ್ಯಂತ ವಂದೇ ಭಾರತ್ ರೈಲುಗಳು ಸಂಚಾರವನ್ನು ಆರಂಭಿಸಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಇದೀಗ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಆರಂಭಿಸುವ ಕುರಿತು ರೈಲ್ವೆ ಸಚಿವರು ಮಹತ್ವದ ಅಪ್ಡೇಟ್ ಒಂದನ್ನು ನೀಡಿದ್ದು ದಿನಾಂಕ ಮತ್ತು ಮಾರ್ಗವನ್ನು ಘೋಷಣೆ ಮಾಡಿದ್ದಾರೆ.

ಹೌದು, ಸಚಿವ ಅಶ್ವಿನಿ ವೈಷ್ಣವ್ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭ ದಿನಾಂಕ, ಮಾರ್ಗ ವಿವರ ಘೋಷಿಸಿದ್ದಾರೆ. ಅವರು ಮುಂದಿನ 15 ರಿಂದ 20 ದಿನದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಅಂದರೆ ಜನವರಿ ಅಂತ್ಯದೊಳಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ ಎಂಬುದು ಖಚಿತವಾಗಿದೆ.

ಇನ್ನೂ ಗೌವ್ಹಾಟಿ ಹಾಗೂ ಕೋಲ್ಕತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದಿದ್ದಾರೆ. ಸ್ಲೀಪರ್ ರೈಲು ದೂರ ಪ್ರಯಾಣಕ್ಕೆ ಆರಾಮಾಗಿ ಪ್ರಯಾಣ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಮತ್ತೊಂದು ಗುಡ್ ನ್ಯೂಸ್ ಏನಂದರೆ, ಇದೇ ವರ್ಷದ ಅಂತ್ಯದೊಳಗೆ 12 ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಿದೆ.

ಈ ರೈಲು ಅರೆ-ಹೈ ಸ್ಪೀಡ್ ಹೊಂದಿದ್ದು, ವಿನ್ಯಾಸದ ಪ್ರಕಾರ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಇದು ಒಟ್ಟು 16 ಬೋಗಿಗಳನ್ನು ಹೊಂದಿರುತ್ತದೆ, ಇದರಲ್ಲಿ 11 ಮೂರು ಹಂತದ ಬೋಗಿಗಳು, ನಾಲ್ಕು ಎರಡು ಹಂತದ ಬೋಗಿಗಳು ಮತ್ತು ಒಂದು ಮೊದಲ ಎಸಿ ಸೇರಿವೆ. ಒಟ್ಟು ಪ್ರಯಾಣಿಕರ ಸಾಮರ್ಥ್ಯ 823, ಇದರಲ್ಲಿ 3 ಎಸಿಯಲ್ಲಿ 611, 2 ಎಸಿಯಲ್ಲಿ 188 ಮತ್ತು 1 ಎಸಿಯಲ್ಲಿ 24 ಸೇರಿವೆ.

You may also like