28
ಹೊಸದಿಲ್ಲಿ: ತಂಬಾಕು ಉತ್ಪನ್ನಗಳಾದ ಸಿಗರೇಟು, ಬೀಡಿ, ಪಾನ್ ಮಸಾಲಾ ಮತ್ತು ಜರ್ದಾಗಳ ಮೇಲೆ ಫೆಬ್ರವರಿ 1ರಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೆಲ್ತ್ ಆ್ಯಂಡ್ ನ್ಯಾಷನಲ್ ಸೆಕ್ಯೂರಿಟಿ ಸೆಸ್ ವಿಧಿಸಲಾಗುವುದು ಎಂದು ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.
ಹೊಸ ಸುಂಕದ ಜತೆಗೆ ಇವುಗಳ ಮೇಲೆ ಅತ್ಯಧಿಕ 40% ಜಿಎಸ್‌ಟಿ (ಬೀಡಿಗೆ 18% ಜಿಎಸ್‌ಟಿ) ಕೂಡ ಸೇರಲಿದೆ. ಸಿಗರೇಟು, ಸೇದುವವರ ಹಾಗೂ ಗುಟ್ಕಾ ಅಗೆಯುವವರ ಜೇಬು ಸುಡಲಿದೆ.
ಹೊಸ ನಿಯಮದಿಂದ ಸಿಗರೇಟ್ಗಳ (1 ಸಾವಿರ ಪ್ಯಾಕ್) ಮೇಲೆ ಕನಿಷ್ಠ 2,050 ರೂ.ನಿಂದ 8,500 ರೂ.ವರೆಗೆ ಸುಂಕ ಹೆಚ್ಚಳ ಇರಲಿದೆ. ಈ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಇಂತಹ ಉತ್ಪನ್ನಗಳ ತಯಾರಕರು ಫೆಬ್ರವರಿ 1ರಿಂದ ಸಿಸಿಟಿವಿ ಪ್ಯಾಕಿಂಗ್ ಅಳವಡಿಸಿಕೊಳ್ಳಬೇಕು. ಯಂತ್ರಗಳ ಕಾರ್ಯನಿರ್ವಹಣೆಯ ಚಿತ್ರಣವಿರಬೇಕು. ಈ ದೃಶ್ಯ ತುಣುಕು ಗಳನ್ನು ಕನಿಷ್ಠ 24 ತಿಂಗಳ ತನಕ ಜತನದಿಂದ ಕಾಪಾಡಬೇಕು ಎಂದು ಆದೇಶಿಸಲಾಗಿದೆ
