17
ಗೋಕರ್ಣ: ಇಲ್ಲಿನ ಮಿಡ್ಲ ಬೀಚ್‌ನಲ್ಲಿ ಸಮುದ್ರದ ನೀರಿಗಿಳಿಯಲು ಹೊರಟಿದ್ದ ಪ್ರವಾಸಿಗ ಕಡಲ ತಟದಲ್ಲಿ ಏಕಾಏಕಿ ಕುಸಿದು ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಪ್ರವಾಸಿಗ, ಹೊಸ ವರ್ಷಾಚರಣೆ ತಮಿಳುನಾಡಿನ ಆರ್.ಕುಮಾರ ಮೃತ ನಿಮಿತ್ತ ಇಲ್ಲಿಗೆ ಬಂದಿದ್ದ ಅವರು ಈಜಲು ಹೊರಟಾಗ ಕುಸಿದ್ದು ಬಿದ್ದರು. ಇದನ್ನು ಗಮನಿಸಿದ ರೆಸಾರ್ಟ್ ಮಾಲೀಕರು, ಜೀವರಕ್ಷಕ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ಆದರೆ ಅಲ್ಲಿ ತಪಾಸಣೆ ನಡೆಸಿ ದಾಗ ಮೃತಪಟ್ಟಿರುವುದು ದೃಢಪಟ್ಟಿತು. ನಂತರ ಮೃತದೇಹವನ್ನ ಜಿಲ್ಲಾ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸಿ ಮೃತ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
