Home » Janardhana Reddy: “ನನ್ನ ಹತ್ಯೆಗೆ ನಾರಾ ಭರತ್ ರೆಡ್ಡಿ ಯತ್ನ”: ಜನಾರ್ದನ ರೆಡ್ಡಿ

Janardhana Reddy: “ನನ್ನ ಹತ್ಯೆಗೆ ನಾರಾ ಭರತ್ ರೆಡ್ಡಿ ಯತ್ನ”: ಜನಾರ್ದನ ರೆಡ್ಡಿ

0 comments

Janardhana Reddy: ಬಳ್ಳಾರಿ‌ ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ(Janardhana Reddy) ಗಂಭೀರ ಆರೋಪ ಮಾಡಿದ್ದಾರೆ.

ತನ್ನ ಮನೆಯ ಮುಂದೆ ನಡೆದ ಗಲಾಟೆ ವಿಚಾರಕ್ಕೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ನನ್ನ ಕ್ಷೇತ್ರದ ಕೆಲಸಕ್ಕೆ ಹೋಗಿದ್ದೆ. ನಾನು ಇಲ್ಲದ ಸಮಯದಲ್ಲಿ ಭರತ್‌ ರೆಡ್ಡಿ ಬೆಂಬಲಿಗರು ಮನೆಯ ಮುಂದೆ ಕುರ್ಚಿ ಹಾಕಿ ಗಲಾಟೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ನಾನು ಶ್ರೀರಾಮುಲು ಅವರಿಗೆ ತಿಳಿಸಿದ್ದೆ. ಅವರು ಪೊಲೀಸರ ಸಮ್ಮುಖದಲ್ಲೇ ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ ಎಂದು ದೂರಿದರು.

ನಾನು ಕಾರಿನಿಂದ ಬಂದು ಇಳಿದ ಕೂಡಲೇ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ನಾಲ್ಕಾರ್‌ ರೌಂಡ್‌ ಫೈರ್‌ ಮಾಡಿದ್ದಾರೆ. ನನ್ನ ಹತ್ಯೆ ಮಾಡಲೆಂದೇ ಇಲ್ಲಿ ಗಲಾಟೆ ಮಾಡಿದ್ದಾರೆ ಎಂದು ದೂರಿ ಫೈರ್‌ ಮಾಡಿದ ಬುಲೆಟ್‌ ಅನ್ನು ಪ್ರದರ್ಶಿಸಿದರು.

You may also like