Home » Shocking news: ಮನೆಗೆ ನುಗ್ಗಿ ಕೋತಿಗಳ ಹಿಂಡಿನಿಂದ ದಾಳಿ: ಮಹಿಳೆ ದಾರುಣ ಸಾವು

Shocking news: ಮನೆಗೆ ನುಗ್ಗಿ ಕೋತಿಗಳ ಹಿಂಡಿನಿಂದ ದಾಳಿ: ಮಹಿಳೆ ದಾರುಣ ಸಾವು

0 comments

Shocking news: ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಲಿಂಗಾಪುರ ಎಂಬಲ್ಲಿ ಕೋತಿಗಳ ಹಿಂಡಿನ ದಾಳಿಗೆ ಮಹಿಳೆ ಬಲಿಯಾದ ಘಟನೆ ನಡೆದಿದೆ.ಲಿಂಗಾಪುರ ಗ್ರಾಮದ ಕೇಸಿ ರೆಡ್ಡಿ ವಿಮಲಾ (59) ಅವರ ಮನೆಗೆ ಕೋತಿಗಳ ಗುಂಪು ನುಗ್ಗಿತು.

ಮಂಗಗಳು ಮನೆಯಲ್ಲಿ ಇರುವ ಆಹಾರ ಸಾಮಾನು ಬಿಕ್ಕಿ ಪದಾರ್ಥಗಳನ್ನು ತಿನ್ನಲು ಶುರು ಮಾಡುತ್ತಿದ್ದಂತೆ ಮಹಿಳೆ ಮಂಗಗಳನ್ನು ಓಡಿಸಲು ಯತ್ನಿಸಿದರು. ಇದರಿಂದ ರೊಚ್ಚಿಗೆದ್ದ ಕೋತಿಗಳ ಹಿಂಡು ಮಹಿಳೆ ಮೇಲೆ ದಾಳಿ ನಡೆಸಿತು. ಸಿಕ್ಕ ಸಿಕ್ಕ ಕಡೆ ಮಂಗಗಳು ದಾಳಿ ನಡೆಸಿದವು. ಇದರಿಂದಾಗಿ ಅವರ ತಲೆಗೆ ತೀವ್ರ ಗಾಯಗಳಾಗಿ ಪ್ರಜ್ಞೆ ತಪ್ಪಿತು.ಆಕೆಯನ್ನು ಗಮನಿಸಿದ ಸ್ಥಳೀಯರು ಹುಜೂರಾಬಾದ್ ಏರಿಯಾ ಆಸ್ಪತ್ರೆಗೆ ಕರೆದೊಯ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಹೇಳಿದರು.ಕಳೆದ ಕೆಲವು ವರ್ಷಗಳಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ತೀವ್ರವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮದಲ್ಲಿ ಮಹಿಳೆ ಸಾವನ್ನಪ್ಪಿದ ನಂತರ ಸ್ಥಳೀಯರು ಇನ್ನಷ್ಟು ಭಯಭೀತರಾಗಿದ್ದಾರೆ.

You may also like