22
Kasaragod: ಕಾಸರಗೋಡು ಉಳಿಯತ್ತಡ್ಕ ಭಗವತಿ ನಗರದಲ್ಲಿಮೊಬೈಲ್ ಚಾರ್ಜ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಡ್ ರೂಂ ಸಂಪೂರ್ಣ ಹೊತ್ತಿ ಉರಿದ ಘಟನೆ ಚಿತ್ರ ಕುಮಾರಿ ಎಂಬವರ ಮನೆಯಲ್ಲಿ ನಡೆದಿದೆ.
ಕಾಸರಗೋಡಿನಿಂದ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೋಣೆಯಲ್ಲಿದ್ದ ಕಪಾಟು, ಮೇಜು, ಮಂಚ, ಹಾಸಿಗೆ, ಉಡುಪು ಸಹಿತ ಬೆಲೆ ಬಾಳುವ ವಸ್ತುಗಳು ಹೊತ್ತಿ ಉರಿದಿವೆ ಎಂದು ತಿಳಿದುಬಂದಿದೆ.
