Home » Hair Straightening: ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಳ್ಳುವ ಯುವತಿಯರೇ ಹುಷಾರ್ – 17 ವರ್ಷದ ಯುವತಿಗೆ ಕಿಡ್ನಿ ಫೇಲ್ಯೂರ್

Hair Straightening: ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಳ್ಳುವ ಯುವತಿಯರೇ ಹುಷಾರ್ – 17 ವರ್ಷದ ಯುವತಿಗೆ ಕಿಡ್ನಿ ಫೇಲ್ಯೂರ್

0 comments

Hair Straightening: ಕೂದಲು ವ್ಯಕ್ತಿಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಯುವತಿಯರು ತಮ್ಮ ಕೂದಲಿನ ಕುರಿತು ಹೆಚ್ಚಿನ ಆಸಕ್ತಿಯನ್ನು ತೋರಿ ನಾನಾ ವಿಧವಾದ ಕೇಶವಿನ್ಯಾಸವನ್ನು ಮಾಡುತ್ತಾ ಅದನ್ನು ಆರೈಕೆ ಮಾಡುತ್ತಾರೆ. ಅದರಲ್ಲಿ ಹೇರ್ ಸ್ಟ್ರೈಟ್ನಿಂಗ್ ಕೂಡ ಒಂದು. ಆದರೆ ಇದೀಗ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಹದಿನೇಳು ವರ್ಷದ ಯುವತಿ ಒಬ್ಬಳು ಕಿಡ್ನಿ ಫೇಲ್ಯೂರ್ ಗೆ ತುತ್ತಾಗಿದ್ದಾಳೆ.

ಹೌದು, ಶಾರೆ ಝೆಡೆಕ್ ವೈದ್ಯಕೀಯ ಕೇಂದ್ರದ ವರದಿಯ ಪ್ರಕಾರ, ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗೆ ಒಳಗಾದ 17 ವರ್ಷದ ಬಾಲಕಿಯೊಬ್ಬಳು ತೀವ್ರವಾದ ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ತಲೆಸುತ್ತು ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಈ ಬಾಲಕಿಯನ್ನು ಮಕ್ಕಳ ವಿಭಾಗದಲ್ಲಿ ಹಲವಾರು ದಿನಗಳ ಕಾಲ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಕೆಯನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗಿದ್ದು, ಆಸ್ಪತ್ರೆಯ ಮಕ್ಕಳ ನೆಫ್ರಾಲಜಿ ವಿಭಾಗದಲ್ಲಿ ಮುಂದಿನ ಚಿಕಿತ್ಸೆ ಮುಂದುವರಿಯಲಿದೆ.

ದೇಶಾದ್ಯಂತ 14 ರಿಂದ 58 ವರ್ಷ ವಯಸ್ಸಿನ 26 ಮಹಿಳೆಯರು ಯಾವುದೇ ಪೂರ್ವ ಅನಾರೋಗ್ಯವಿಲ್ಲದಿದ್ದರೂ ತೀವ್ರ ಕಿಡ್ನಿ ವೈಫಲ್ಯದೊಂದಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದರು. ಬಳಿಕ ಇದನ್ನು ಸಂಶೋಧನೆಗೆ ಒಳಪಡಿಸಿದಾಗ  ಇವರೆಲ್ಲರೂ ಗ್ಲೈಆಕ್ಸಿಲಿಕ್ ಆಮ್ಲ (Glyoxylic acid) ಹೊಂದಿರುವ ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗೆ ಒಳಗಾಗಿದ್ದುದು ತಿಳಿದು ಬಂದಿದೆ.

You may also like