Home » CET: CET 2026 ವೇಳಾಪಟ್ಟಿ ಪ್ರಕಟ: ಏಪ್ರಿಲ್‌ 22, 23 & 24ರಂದು ಪರೀಕ್ಷೆ

CET: CET 2026 ವೇಳಾಪಟ್ಟಿ ಪ್ರಕಟ: ಏಪ್ರಿಲ್‌ 22, 23 & 24ರಂದು ಪರೀಕ್ಷೆ

0 comments

CET: ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ CET 2026ರ ವೇಳಾಪಟ್ಟಿ ಪ್ರಕಟವಾಗಿದೆ. ಉನ್ನತ ಶಿಕ್ಷಣ ‌ಸಚಿವ ಡಾ.ಎಂ.ಸಿ ಸುಧಾಕರ್ ಮತ್ತು ವೈದ್ಯಕೀಯ ಸಚಿವ ಶರಣು ‌ಪ್ರಕಾಶ್ ಪಾಟೀಲ್ ಅವರು ಕರ್ನಾಟಕ ‌ಪರೀಕ್ಷಾ ಪ್ರಾಧಿಕಾರ (KEA) ಕಚೇರಿಯಲ್ಲಿ ವೇಳಾಪಟ್ಟಿ ಪ್ರಕಟಿಸಿದರು.ಏ.22 ರಿಂದ 24ರವೆಗೆ ಪರೀಕ್ಷೆಗಳು ನಡೆಯಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ ಆಗಲಿದೆ.

ಇದೇ ವೇಳೆ ಸಿಇಟಿ ವೇಳಾಪಟ್ಟಿ ಜೊತೆಗೆ ಪಿಜಿಸಿಇಟಿ, ಕೆಸೆಟ್ ಪರೀಕ್ಷೆಗಳಿಗೂ ವೇಳಾಪಟ್ಟಿ ಪ್ರಕಟ ಮಾಡಿದರು. ಇದೇ ವೇಳೆ ಅರ್ಜಿ ಸಲ್ಲಿಕೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಮಾಹಿತಿಯುಳ್ಳ ವಿದ್ಯಾರ್ಥಿ ದಿಕ್ಸೂಚಿಯನ್ನು ಬಿಡುಗಡೆ ‌ಮಾಡಿದರು.

CET ವೇಳಾಪಟ್ಟಿ ಹೀಗಿದೆ:ಜನವರಿ 17- ಅರ್ಜಿ ಸಲ್ಲಿಕೆ ಪ್ರಾರಂಭ.

ಏಪ್ರಿಲ್ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ.

ಏಪ್ರಿಲ್ 23- ಭೌತಶಾಸ್ತ್ರ, ರಸಾಯನಶಾಸ್ತ್ರ.

ಏಪ್ರಿಲ್ 24- ಗಣಿತ, ಜೀವಶಾಸ್ತ್ರ.

ಪಿಜಿಸಿಇಟಿ ವೇಳಾಪಟ್ಟಿ?

ಮೇ 14- PGCET( MBA, MCA)

ಮೇ 23- PGCET( ME/M.Tech)

ಮೇ 23- DCET

ಜುಲೈ 18- M.Sc Nursing, MPT, M.Sc-AHS

ಅಕ್ಟೋಬರ್ 11- KSET ಪರೀಕ್ಷೆ

ನವೆಂಬರ್ 21- M-pharma, Pharma-D ಪರೀಕ್ಷೆ.

You may also like