Vande Bharat Sleeper : ವಂದೇ ಭಾರತ್ ರೈಲುಗಳು ಭಾರತದ ಅಭಿವೃದ್ಧಿಯನ್ನು, ತಂತ್ರಜ್ಞಾನದ ಮುಂದುವರಿಕೆಯನ್ನು ಸೂಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದೀಗ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಆರಂಭಿಸುವ ಕುರಿತು ರೈಲ್ವೆ ಸಚಿವರು ಮಹತ್ವದ ಅಪ್ಡೇಟ್ ಒಂದನ್ನು ನೀಡಿದ್ದು ಮುಂದಿನ 15 ರಿಂದ 20 ದಿನದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಅಂದರೆ ಜನವರಿ ಅಂತ್ಯದೊಳಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ ಎಂಬುದು ಖಚಿತವಾಗಿದೆ. ಹಾಗಿದ್ರೆ ಈ ವಂದೇ ಭಾರತ್ ಸ್ಲೀಪರ್ ರೈಲುಗಳ ಟಿಕೆಟ್ ದರ ವೇಷ್ಟು ಎಂದು ನೋಡೋಣ.
ಗೌವ್ಹಾಟಿ ಹಾಗೂ ಕೋಲ್ಕತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದಿದ್ದಾರೆ. ಸ್ಲೀಪರ್ ರೈಲು ದೂರ ಪ್ರಯಾಣಕ್ಕೆ ಆರಾಮಾಗಿ ಪ್ರಯಾಣ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಮತ್ತೊಂದು ಗುಡ್ ನ್ಯೂಸ್ ಏನಂದರೆ, ಇದೇ ವರ್ಷದ ಅಂತ್ಯದೊಳಗೆ 12 ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಿದೆ.
ಹೊಸ ದರಗಳ ಪ್ರಕಾರ, 3ನೇ ಎಸಿ ಕೋಚ್‌ಗಳ ದರ ಆಹಾರ ಸೇರಿದಂತೆ 2,300 ರೂ., 2ನೇ ಎಸಿ ದರ 3,000 ರೂ. ಮತ್ತು 3ಡಿಡಿ ಎಸಿ ಕೋಚ್‌ಗಳ ದರ 3,600 ರೂ. ಆಗಿರುತ್ತದೆ. ಈ ಎಲ್ಲಾ ದರಗಳು ಆಹಾರವನ್ನು ಒಳಗೊಂಡಿರುತ್ತವೆ. ‘ಇದರ ಪ್ರಯಾಣ ದರವನ್ನು ವಿಮಾನದ ದರಕ್ಕಿಂತ ಕಡಿಮೆ ಇರಿಸಲಾಗಿದೆ. ಗುವಾಹಟಿಯಿಂದ ಹೌರಾಗೆ ವಿಮಾನ ದರ ಸಾಮಾನ್ಯವಾಗಿ 6,000 ರೂ.ನಿಂದ 8,000 ರೂ.ವರೆಗೆ ಇರುತ್ತದೆ. ವಂದೇ ಭಾರತ್ ರೈಲಿನಲ್ಲಿ 3ನೇ ಎಸಿ ದರವು ಊಟ ಸೇರಿದಂತೆ ಸುಮಾರು 2,300 ರೂ. ಇರಲಿದೆ. 2ನೇ ಎಸಿಗೆ ಸುಮಾರು 3,000 ರೂ. ಮತ್ತು 1ನೇ ಎಸಿಗೆ ಸುಮಾರು 3,600 ರೂ. ಆಗಿರುತ್ತದೆ. ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಈ ದರಗಳನ್ನು ನಿಗದಿಪಡಿಸಲಾಗಿದೆ’ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ರೈಲು ಅರೆ-ಹೈ ಸ್ಪೀಡ್ ಹೊಂದಿದ್ದು, ವಿನ್ಯಾಸದ ಪ್ರಕಾರ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಇದು ಒಟ್ಟು 16 ಬೋಗಿಗಳನ್ನು ಹೊಂದಿರುತ್ತದೆ, ಇದರಲ್ಲಿ 11 ಮೂರು ಹಂತದ ಬೋಗಿಗಳು, ನಾಲ್ಕು ಎರಡು ಹಂತದ ಬೋಗಿಗಳು ಮತ್ತು ಒಂದು ಮೊದಲ ಎಸಿ ಸೇರಿವೆ. ಒಟ್ಟು ಪ್ರಯಾಣಿಕರ ಸಾಮರ್ಥ್ಯ 823, ಇದರಲ್ಲಿ 3 ಎಸಿಯಲ್ಲಿ 611, 2 ಎಸಿಯಲ್ಲಿ 188 ಮತ್ತು 1 ಎಸಿಯಲ್ಲಿ 24 ಸೇರಿವೆ.
