Home » Magadi: ಯುವತಿ ಅಪಹರಣ ಆರೋಪ -ಯೂಟ್ಯೂಬರ್ಸ್ ಕಬ್ಜ ಶರಣ್, ಮಂಡ್ಯ ಕೆಂಪಣ್ಣಗೆ ಸಾರ್ವಜನಿಕರಿಂದ ಹಿಗ್ಗಾ ಮುಗ್ಗಾ ಗೂಸ !!

Magadi: ಯುವತಿ ಅಪಹರಣ ಆರೋಪ -ಯೂಟ್ಯೂಬರ್ಸ್ ಕಬ್ಜ ಶರಣ್, ಮಂಡ್ಯ ಕೆಂಪಣ್ಣಗೆ ಸಾರ್ವಜನಿಕರಿಂದ ಹಿಗ್ಗಾ ಮುಗ್ಗಾ ಗೂಸ !!

0 comments

Magadi: ಹೊಸ ವರ್ಷದ ಆಚರಣೆಯ ದಿನ ಯುವತಿಯನ್ನು ಅಪಹರಣ ಮಾಡಿದ ಆರೋಪ ದಡಿ ಯೂಟ್ಯೂಬರ್ಸ್ ಕಬ್ಜ ಶರಣ್ ಹಾಗೂ ಮಂಡ್ಯ ಕೆಂಪಣ್ಣಗೆ ಮಾಗಡಿಯಲ್ಲಿ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅನೇಕರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. 

ಹೌದು, ಹೊಸ ವರ್ಷದ ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಯೌಟ್ಯೂಬರ್ಸ್ ಗಳಾದ ಕಬ್ಜ ಶರಣ್ ಮತ್ತು ಮಂಡ್ಯ ಕೆಂಪಣ್ಣ ಅವರಿಗೆ ಮಾಗಡಿಯಲ್ಲಿ ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ಹೊಡೆದಾಟದ ವಿಡಿಯೋದಲ್ಲಿ ಇವರಿಬ್ಬರಿಗೆ ಯಾಕೆ ಗೂಸ ಬೀಳುತ್ತಿದೆ ಎಂಬುದಾಗಿ ಎಲ್ಲಿಯೂ ಸ್ಪಷ್ಟೀಕರಣ ಸಿಗುವುದಿಲ್ಲ. ನೋಡುಗರಿಗಂತೂ ಇದು ಗೊಂದಲಮಯವಾದ ವಾತಾವರಣವನ್ನು ಸೃಷ್ಟಿಸುತ್ತದೆ. ವಿಡಿಯೋದಲ್ಲಿ ಅವರಿಬ್ಬರೂ ಎಷ್ಟು ಬೇಡಿಕೊಂಡರೂ ಕೂಡ ಸ್ಥಳೀಯರು ದಯೆ ತೋರದೆ ಹೊಡೆಯುವುದನ್ನು ಕಾಣಬಹುದು. ಆದರೆ ಹೊಸ ವರ್ಷದ ಆಚರಣೆಯ ನೆಪದಲ್ಲಿ ಈ ಯೂಟ್ಯೂಬರ್ಸ್ ಗಳು ಮಾಗಡಿಯ ಯುವತಿಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

https://www.instagram.com/reel/DS_icClE4-G/?igsh=MXA4dHZkZDduYnR6Nw==

ಈ ಒಂದು ಘಟನೆಯಲ್ಲಿ ಕಬ್ಜ ಶರಣ್ ಅವರಿಗೆ ತಲೆಗೆ ಪೆಟ್ಟಾಗಿದ್ದು ಎರಡು ಸ್ಟಿಚ್ ಹಾಕಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ವಿಡಿಯೋವನ್ನು ಇಟ್ಟುಕೊಂಡು ಅನೇಕ ಟ್ರೋಲರ್ಗಳು ತಮಗೆ ಬೇಕಾದಂತೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ತಮ್ಮ ಮೇಲೆ ಹಲ್ಲೆ ಯಾಕೆ ನಡೆಯಿತು ಎಂಬುದಾಗಿ ಶರಣ್ ಮತ್ತು ಕೆಂಪಣ್ಣ ಇಬ್ಬರು ಮತ್ತೆ ಪ್ರತ್ಯೇಕವಾಗಿ ವಿಡಿಯೋ ಮಾಡಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. 

ಕಬ್ಜಾ ಶರಣ್ ಅವರು ಈ ಕುರಿತಾಗಿ ವಿಡಿಯೋ ಮಾಡಿದ್ದು, ಘಟನೆಯ ವಿವರವನ್ನು ಬಿಡಿಸಿಟ್ಟಿದ್ದಾರೆ. ಅದರಲ್ಲಿ ಅವರು ಹೊಸ ವರ್ಷದ ದಿನ ನಾವು ಭೂದಿನಕೆರೆಗೆ ದೇವರ ದರ್ಶನಕ್ಕಾಗಿ ತೆರಳಿದ್ದೆವು. ಈ ಸಂದರ್ಭದಲ್ಲಿ ಕೆಲವು ಸೋಶಿಯಲ್ ಮೀಡಿಯಾ ಸ್ಟಾರ್ಸ್, ಯೌಟ್ಯೂಬರ್ಗಳು ಅಲ್ಲಿಗೆ ಬಂದಿದ್ದರು. ಅದರಲ್ಲಿ ರವಿ ಮಂಡ್ಯ ಅವರು ಕೂಡ ಒಬ್ಬರು. ದೇವರ ದರ್ಶನದ ಬಳಿಕ ಅಲ್ಲಿಂದ ಹೊರಡುವಾಗ ರವಿ ಮಂಡ್ಯ ಅವರು ಮಾಗಡಿ ಸ್ಟೇಷನ್ ಅಲ್ಲಿ ನಮಗೆ ಒಬ್ಬರು ಪರಿಚಯದವರಿದ್ದಾರೆ, ಮಾತನಾಡಿಸಿಕೊಂಡು ಹೋಗೋಣ ಎಂದು ಕರೆದುಕೊಂಡು ಹೋಗುತ್ತಾರೆ. ಆದರೆ ಸ್ಟೇಷನ್ ಅಲ್ಲಿ ಇರುವವರು ಯಾರು, ಏನು ಎಂಬ ವಿಚಾರ ನನಗೆ ಏನೂ ಗೊತ್ತಿಲ್ಲ. ಸ್ಟೇಷನಿಂದ ವಾಪಸ್ ಮರಳುವಾಗ ಅಲ್ಲಿನ ಸ್ಥಳೀಯ ಗ್ರಾಮಸ್ಥರೆಲ್ಲರೂ ಸೇರಿಕೊಂಡು ನಮ್ಮ ಮೇಲೆ ಅಟ್ಯಾಕ್, ಮಾಡುತ್ತಾರೆ. ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾರೆ. ನಾವು ಎಷ್ಟೇ ಮನವರಿಕೆ ಮಾಡಿದರು ಕೂಡ ಅವರು ಕೇಳುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಮಂಡ್ಯ ಕೆಂಪಣ್ಣ ಅವರು ಕೂಡ ಇದೇ ವಿಚಾರವಾಗಿ ವಿಡಿಯೋ ಮಾಡಿ ಸ್ಪಷ್ಟೀಕರಣ ಕೊಟ್ಟಿದ್ದಾರೆ.

https://www.instagram.com/reel/DS-JQ8pk3q_/?igsh=MXZnbWI5d3M3dnliOA==

ಅಸಲಿ ವಿಚಾರ ಏನು?

 ಅಸಲಿ ವಿಚಾರ ಏನು ಎಂದು ನೋಡುವುದಾದರೆ ರವಿ ಜಮುನಾ ಎಂಬುವವನು ಮಾಗಡಿಯಲ್ಲಿ ಯುವತಿಯನ್ನು ಕಾರ್ ನಲ್ಲಿ ಅಪಹರಣ ಮಾಡಿ ಸಿಕ್ಕಿಬಿದ್ದಿರುತ್ತಾನೆ. ಯುವತಿ ಹೇಗೋ ಫೋನ್ ತೆಗೆದುಕೊಂಡು ಮನೆಯವರಿಗೆ ತಿಳಿಸಿ ಈ ರವಿ ಜಮುನಾ ಅವನನ್ನು ಅರೆಸ್ಟ್ ಮಾಡಿಸಿರುತ್ತಾಳೆ. ಹೀಗಾಗಿ ರವಿ ಜಮುನಾ ಅವರು ಮಂಡ್ಯ ರವಿ ಅವರಿಗೆ ಪರಿಚಯವಿದ್ದ ಕಾರಣ ಅವರನ್ನು ನೋಡಲು ಪೊಲೀಸ್ ಸ್ಟೇಷನ್ ಗೆ ಬರುತ್ತಾರೆ. ಏನು ತಿಳಿಯದ ಕಬ್ಜಾ ಶರಣ್ ಮತ್ತು ಮಂಡ್ಯ ಕೆಂಪಣ್ಣ ಅವರು ಕೂಡ ಇವರೊಂದಿಗೆ ಮಾಗಡಿ ಸ್ಟೇಷನ್ ಗೆ ಬರುತ್ತಾರೆ. ಈ ಸಂದರ್ಭದಲ್ಲಿ ಇವರೆಲ್ಲರೂ ಒಂದೇ ಗ್ಯಾಂಗ್ ನವರು ಎಂದು ತಿಳಿದು ಗ್ರಾಮಸ್ಥರೆಲ್ಲರೂ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಕೆಲವು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೆ ಇದರಲ್ಲಿ ಯಾವುದು ಸತ್ಯ ಸುಳ್ಳು ಎಂಬುದು ಇನ್ನು ತಿಳಿದು ಬಂದಿಲ್ಲ.

https://www.instagram.com/reel/DS-J4EBjTCf/?igsh=MXJhYnpnODU4Mjh2dw==

You may also like