Home » ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಲಕ್ಷ ಮೋದಕ ಹೋಮ ಪ್ರಾರಂಭ, ಜ.3 ಬೆಳಿಗ್ಗೆ 8 ಗಂಟೆಯಿಂದ, ಜ. 6ರ ತನಕ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಲಕ್ಷ ಮೋದಕ ಹೋಮ ಪ್ರಾರಂಭ, ಜ.3 ಬೆಳಿಗ್ಗೆ 8 ಗಂಟೆಯಿಂದ, ಜ. 6ರ ತನಕ

0 comments

ಸೌತಡ್ಕ: ದಿನಾಂಕ 02-01-2026 ಶುಕ್ರವಾರದಿಂದ ಶುರುವಾಗಿ ಧನುರ್ಮಾಸ 22 ದಿನಾಂಕ 06-01-2026 ಮಂಗಳವಾರದ ತನಕ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಲಕ್ಷ ಮೋದಕ ಹವನವು ನಡೆಯಲಿರುವುದು. ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ನಮ್ಮ ಯಥೋಚಿತ ಸತ್ಕಾರಗಳನ್ನು ಸ್ವೀಕರಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.
ಕಾರ್ಯಕ್ರಮಗಳ ವಿವರ:
02-1-2026 ಶುಕ್ರವಾರ:
ಸಂಜೆ 5.30ರಿಂದ: ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಂಟಪ ಸಂಸ್ಥಾದ, ಅಗ್ನಿ ಜನನ
ರಾತ್ರಿ 8.30 : ಮಂಗಳಾರತಿ, ಪ್ರಸಾದ ವಿತರಣೆ
03-1-2026 ಶನಿವಾರ:
ಬೆಳಿಗ್ಗೆ 8.00ರಿಂದ: ಮೋದಕ ಹೋಮ ಪ್ರಾರಂಭ
ಮಧ್ಯಾಹ್ನ 12.00ಕ್ಕೆ: ಪೂರ್ಣಾಹುತಿ
ರಾತ್ರಿ 8.30: ಮಹಾಪೂಜೆ
04-1-2026 ರವಿವಾರ:
ಬೆಳಿಗ್ಗೆ 8.00ರಿಂದ: ಮೋದಕ ಹೋಮ ಪ್ರಾರಂಭ
ಮಧ್ಯಾಹ್ನ 12.00ಕ್ಕೆ: ಪೂರ್ಣಾಹುತಿ
ಸಂಜೆ 6.00ರಿಂದ: ಪಾರಾಯಣ
05-1-2026 ಸೋಮವಾರ:
ಬೆಳಿಗ್ಗೆ 8.00ರಿಂದ: ಮೋದಕ ಹೋಮ ಪ್ರಾರಂಭ
ಮಧ್ಯಾಹ್ನ 12.00ಕ್ಕೆ: ಪೂರ್ಣಾಹುತಿ
ಸಂಜೆ 5.30ರಿಂದ: ಪಾರಾಯಣ, ಅಷ್ಟಾವಧಾನ ಸೇವೆ
ರಾತ್ರಿ 8.30: ಮಹಾಪೂಜೆ
06-1-2026 ಮಂಗಳವಾರ:
ಬೆಳಿಗ್ಗೆ 7.30ರಿಂದ: ಮೋದಕ ಹೋಮ ಪ್ರಾರಂಭ
ಮಧ್ಯಾಹ್ನ 11.30ಕ್ಕೆ: ಲಕ್ಷ ಮೋದಕಯಾಗದ ಮಹಾ ಪೂರ್ಣಾಹುತಿ ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ
ಸಂಜೆ: ಮೂಡಪ್ಪ ಸೇವೆ, ಉಷ್ಣಾವಧಾನ ಸೇವೆ ಯಕ್ಷಗಾನ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದವರಿಂದ.

You may also like