13
Bengaluru: ಯಲಹಂಕದ (Yelahanka) ಮಾದಪ್ಪನ ಹಳ್ಳಿಯಲ್ಲಿ ವಿಶ್ವ ಗುರು ಬಸವಣ್ಣ ಬೃಹತ್ ಉದ್ಯಾನವನ Vishva Guru Basavanna Park) ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ (Cabinet Meeting) ಸಮ್ಮತಿ ನೀಡಿದೆ.ಒಟ್ಟು 153 ಎಕ್ರೆ ಎಕರೆ ಜಾಗದಲ್ಲಿ ಉದ್ಯಾನವನ ನಿರ್ಮಾಣವಾಗಲಿದೆ.
ನಿರ್ಮಾಣವಾದ ಬಳಿಕ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ಬಳಿಕ ಅತಿದೊಡ್ಡ ಉದ್ಯಾನವನ ಎಂಬ ಖ್ಯಾತಿಗೆ ಇದು ಪಾತ್ರವಾಗಲಿದೆ. ಈ ಉದ್ಯಾನವನ ನಿರ್ಮಾಣಕ್ಕೆ ಒಟ್ಟು 250 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು ಮೊದಲು 50 ಕೋಟಿ ರೂ. ಬಿಡುಗಡೆಗೆ ಇಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. 3 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ಗುರಿಯನ್ನು ಹಾಕಿಕೊಂಡಿದ್ದು, ಮುಂದೆ ಅನೇಕ ಕಂಪನಿಗಳ ಸಿಎಸ್‌ಆರ್ ಫಂಡ್ ಬಳಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
