Vande Bharat Sleeper : ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಆರಂಭಿಸುವ ಕುರಿತು ರೈಲ್ವೆ ಸಚಿವರು ಮಹತ್ವದ ಅಪ್ಡೇಟ್ ಒಂದನ್ನು ನೀಡಿದ್ದು ಮುಂದಿನ 15 ರಿಂದ 20 ದಿನದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಅಂದರೆ ಜನವರಿ ಅಂತ್ಯದೊಳಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ ಎಂಬುದು ಖಚಿತವಾಗಿದೆ. ಈ ವಂದೇ ಭಾರತ್ ಸ್ಲೀಪರ್ ರೈಲುಗಳ ವೈಶಿಷ್ಟ್ಯತೆ ಕೇಳಿದರೆ ನೀವೇ ಶಾಕ್ ಆಗುತ್ತೀರಿ.
ಯಸ್, ಗೌವ್ಹಾಟಿ ಹಾಗೂ ಕೋಲ್ಕತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದಿದ್ದಾರೆ. ಸ್ಲೀಪರ್ ರೈಲು ದೂರ ಪ್ರಯಾಣಕ್ಕೆ ಆರಾಮಾಗಿ ಪ್ರಯಾಣ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಮತ್ತೊಂದು ಗುಡ್ ನ್ಯೂಸ್ ಏನಂದರೆ, ಇದೇ ವರ್ಷದ ಅಂತ್ಯದೊಳಗೆ 12 ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಿದೆ. ಈ ಸ್ಲಿಪ್ಪರ್ ರೈಲುಗಳಲ್ಲಿ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯೂ ಕೂಡ ಇರಲಿದೆ. ಹಾಗಿದ್ದರೆ ಇದರೊಂದಿಗೆ ಇನ್ನು ಯಾವ ಯಾವ ರೀತಿಯ ವಿಶೇಷ ಸೌಲಭ್ಯಗಳು ಇವೆ ಎಂದು ನೋಡೋಣ.
ಐಸಿಎಫ್ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ತಂತ್ರಜ್ಞಾನ ಬಳಸಿಕೊಂಡು ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಈ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಿದೆ. ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸಲಿರುವ ಈ ರೈಲು, 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದೆ. ವಿವಿಧ ವರ್ಗಗಳಲ್ಲಿ 823 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. 11 ಹವಾನಿಯಂತ್ರಿತ ಬೋಗಿಗಳಿವೆ. ಇದರಲ್ಲಿ 3-ಟೈರ್, 4 ಎಸಿ 2-ಟೈರ್ ಮತ್ತು 1 ಫಸ್ಟ್ ಕ್ಲಾಸ್ ಬೋಗಿಗಳನ್ನು ಒಳಗೊಂಡಿದೆ.
ಫಸ್ಟ್ ಕ್ಲಾಸ್ ಕೋಚ್‌ನಲ್ಲಿ ಸ್ನಾನಕ್ಕೆ ಬಿಸಿ ನೀರಿನ ಸೌಲಭ್ಯವೂ ಇದೆ. ಆಧುನಿಕ ವೈಶಿಷ್ಟ್ಯದ ಐಷಾರಾಮಿ ಸೌಲಭ್ಯಗಳನ್ನು ನೀಡಲಿದೆ. ಪ್ರಯಾಣಿಕರಿಗೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಪ್ರತ್ಯೇಕ ಓದುವ ಲೈಟ್‌ಗಳನ್ನು ನೀಡಲಿದೆ. ಸಿಸಿಟಿವಿ ಕ್ಯಾಮೆರಾ, ಡಿಸ್‌ಪ್ಲೇ ಪ್ಯಾನೆಲ್‌ಗಳನ್ನು ಸಹ ಈ ರೈಲು ಹೊಂದಿದೆ. ಮಧ್ಯಮ ವರ್ಗದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರಗಳನ್ನು ನಿಗದಿಪಡಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 3AC ದರ ಸುಮಾರು ₹2,300, 2AC ದರ ₹3,000, ಮತ್ತು 1AC ದರ ₹3,600 ಹೊಂದಿದೆ. ಇದರ ಜೊತೆಗೆ ಊಟದ ವ್ಯವಸ್ಥೆ ಕೂಡ ಇರಲಿದೆ.
ಟಿಕೆಟ್ ರೇಟ್ ಎಷ್ಟು?
ಹೊಸ ದರಗಳ ಪ್ರಕಾರ, 3ನೇ ಎಸಿ ಕೋಚ್‌ಗಳ ದರ ಆಹಾರ ಸೇರಿದಂತೆ 2,300 ರೂ., 2ನೇ ಎಸಿ ದರ 3,000 ರೂ. ಮತ್ತು 3ಡಿಡಿ ಎಸಿ ಕೋಚ್‌ಗಳ ದರ 3,600 ರೂ. ಆಗಿರುತ್ತದೆ. ಈ ಎಲ್ಲಾ ದರಗಳು ಆಹಾರವನ್ನು ಒಳಗೊಂಡಿರುತ್ತವೆ. ‘ಇದರ ಪ್ರಯಾಣ ದರವನ್ನು ವಿಮಾನದ ದರಕ್ಕಿಂತ ಕಡಿಮೆ ಇರಿಸಲಾಗಿದೆ. ಗುವಾಹಟಿಯಿಂದ ಹೌರಾಗೆ ವಿಮಾನ ದರ ಸಾಮಾನ್ಯವಾಗಿ 6,000 ರೂ.ನಿಂದ 8,000 ರೂ.ವರೆಗೆ ಇರುತ್ತದೆ. ವಂದೇ ಭಾರತ್ ರೈಲಿನಲ್ಲಿ 3ನೇ ಎಸಿ ದರವು ಊಟ ಸೇರಿದಂತೆ ಸುಮಾರು 2,300 ರೂ. ಇರಲಿದೆ. 2ನೇ ಎಸಿಗೆ ಸುಮಾರು 3,000 ರೂ. ಮತ್ತು 1ನೇ ಎಸಿಗೆ ಸುಮಾರು 3,600 ರೂ. ಆಗಿರುತ್ತದೆ. ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಈ ದರಗಳನ್ನು ನಿಗದಿಪಡಿಸಲಾಗಿದೆ’ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
