Home » Magadi: ಮಾಗಡಿಯಲ್ಲಿ ಕಬ್ಜ ಶರಣ್, ಮಂಡ್ಯ ಕೆಂಪಣ್ಣಗೆ ಸಾರ್ವಜನಿಕರಿಂದ ಥಳಿತ – ಪೊಲೀಸರಿಂದ ಅಸಲಿ ಕಾರಣ ರಿವಿಲ್

Magadi: ಮಾಗಡಿಯಲ್ಲಿ ಕಬ್ಜ ಶರಣ್, ಮಂಡ್ಯ ಕೆಂಪಣ್ಣಗೆ ಸಾರ್ವಜನಿಕರಿಂದ ಥಳಿತ – ಪೊಲೀಸರಿಂದ ಅಸಲಿ ಕಾರಣ ರಿವಿಲ್

0 comments

Magadi:  ಯುವತಿಯನ್ನು ಅಪಹರಣ ಮಾಡಿದ ಆರೋಪ ದಡಿ ಯೂಟ್ಯೂಬರ್ಸ್ ಕಬ್ಜ ಶರಣ್ ಹಾಗೂ ಮಂಡ್ಯ ಕೆಂಪಣ್ಣಗೆ ಮಾಗಡಿಯಲ್ಲಿ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೀಗ ಈ ತಳಿತಕ್ಕೆ ಕಾರಣ ರಿವಿಲ್ ಆಗಿದೆ

ಹೌದು, ಹೊಸ ವರ್ಷದ ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಯೌಟ್ಯೂಬರ್ಸ್ ಗಳಾದ ಕಬ್ಜ ಶರಣ್ ಮತ್ತು ಮಂಡ್ಯ ಕೆಂಪಣ್ಣ ಅವರಿಗೆ ಮಾಗಡಿಯಲ್ಲಿ ಸಾರ್ವಜನಿಕರು ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ಹೊಡೆದಾಟದ ವಿಡಿಯೋದಲ್ಲಿ ಇವರಿಬ್ಬರಿಗೆ ಯಾಕೆ ಗೂಸ ಬೀಳುತ್ತಿದೆ ಎಂಬುದಾಗಿ ಎಲ್ಲಿಯೂ ಸ್ಪಷ್ಟೀಕರಣ ಸಿಗುವುದಿಲ್ಲ. ನೋಡುಗರಿಗಂತೂ ಇದು ಗೊಂದಲಮಯವಾದ ವಾತಾವರಣವನ್ನು ಸೃಷ್ಟಿಸುತ್ತದೆ. ವಿಡಿಯೋದಲ್ಲಿ ಅವರಿಬ್ಬರೂ ಎಷ್ಟು ಬೇಡಿಕೊಂಡರೂ ಕೂಡ ಸ್ಥಳೀಯರು ದಯೆ ತೋರದೆ ಹೊಡೆಯುವುದನ್ನು ಕಾಣಬಹುದು. ಆದರೆ ಹೊಸ ವರ್ಷದ ಆಚರಣೆಯ ನೆಪದಲ್ಲಿ ಈ ಯೂಟ್ಯೂಬರ್ಸ್ ಗಳು ಮಾಗಡಿಯ ಯುವತಿಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆದರೆ ಇದರ ಹಿಂದೆ ಬೇರೆ ಅಸಲಿ ವಿಚಾರವಿದೆ ಎಂದು ಶರಣ ಹಾಗೂ ಕೆಂಪಣ್ಣ ವಿಡಿಯೋ ಮಾಡಿ ತಿಳಿಸಿದ್ದರು. ಆದರೆ ಇದೀಗ ಈ ಪ್ರಕರಣದ ಅಸಲಿ ವಿಚಾರವೇನೆಂದು ಪೊಲೀಸರು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಮಾಗಡಿಯಲ್ಲಿ ನ್ಯೂ ಇಯರ್ ಪಾರ್ಟಿ ಮಾಡಲು ಹೋಗಿದ್ದ ಖ್ಯಾತ ರೀಲ್ಸ್ ಸ್ಟಾರ್‌ಗಳಾದ ‘ಸಕ್ಕರೆ ನಾಡು ಕೆಂಪಣ್ಣ’ ಮತ್ತು ‘ಕಬ್ಜಾ ಶರಣ್’ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋಗಳು ವೈರಲ್ ಆಗಿವೆ. ಇವರೆಲ್ಲರೂ ಹೊಸ ವರ್ಷದ ಪಾರ್ಟಿ ಮುಗಿಸಿ ವಾಪಸ್ ಬರುವಾಗ ಅವರ ಸ್ನೇಹಿತನೊಬ್ಬ ಅಪ್ರಾಪ್ತ ಬಾಲಕಿಯನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಆ ಸ್ನೇಹಿತನನ್ನು ಕಾಪಾಡಲು ಹೋದ ಸ್ಟಾರ್‌ಗಳಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಮಾಗಡಿ ಪೊಲೀಸ್ ಠಾಣೆಗೆ ಹೋಗಿ ತಮ್ಮ ಸ್ನೇಹಿತನನ್ನು ಕಾಪಾಡಲು ಮುಂದಾದ ರೀಲ್ಸ್ ಸ್ಟಾರ್‌ಗಳಿಗೆ ಅಲ್ಲಿನ ಜನರೇ ಹಿಡಿದುಕೊಂಡು ತದುಕಿದ್ದಾರೆ. ಈ ವೇಳೆ ‘ನಾವು ತಪ್ಪು ಮಾಡಿಲ್ಲ’ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಸಮರ್ಥಿಸಿಕೊಳ್ಳುತ್ತಿದ್ದರೂ, ಜನರು ಮಾತ್ರ ನಾಲ್ಕು ಪೆಟ್ಟು ಕೊಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅಲ್ಲಿ ಸೇರಿದ್ದ ಜನರೆಲ್ಲರೂ ಒಂದೊಂದು ಏಟು ಕೊಟ್ಟಿರುವ ವೀಡಿಯೋಗಳು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಡ್ನ್ಯಾಪ್ ಕಹಾನಿ ಹಾಗೂ ಪಾರ್ಟಿಯ ಆಫ್ಟರ್ ಎಫೆಕ್ಟ್ ಈಗ ಪೊಲೀಸ್ ಮೆಟ್ಟಿಲೇರಿದೆ ಎಂದು ಮಾಹಿತಿ ಬಂದಿದೆ.

ಅಸಲಿ ವಿಚಾರ ಏನು?

 ಅಸಲಿ ವಿಚಾರ ಏನು ಎಂದು ನೋಡುವುದಾದರೆ ರವಿ ಜಮುನಾ ಎಂಬುವವನು ಮಾಗಡಿಯಲ್ಲಿ ಯುವತಿಯನ್ನು ಕಾರ್ ನಲ್ಲಿ ಅಪಹರಣ ಮಾಡಿ ಸಿಕ್ಕಿಬಿದ್ದಿರುತ್ತಾನೆ. ಯುವತಿ ಹೇಗೋ ಫೋನ್ ತೆಗೆದುಕೊಂಡು ಮನೆಯವರಿಗೆ ತಿಳಿಸಿ ಈ ರವಿ ಜಮುನಾ ಅವನನ್ನು ಅರೆಸ್ಟ್ ಮಾಡಿಸಿರುತ್ತಾಳೆ. ಹೀಗಾಗಿ ರವಿ ಜಮುನಾ ಅವರು ಮಂಡ್ಯ ರವಿ ಅವರಿಗೆ ಪರಿಚಯವಿದ್ದ ಕಾರಣ ಅವರನ್ನು ನೋಡಲು ಪೊಲೀಸ್ ಸ್ಟೇಷನ್ ಗೆ ಬರುತ್ತಾರೆ. ಏನು ತಿಳಿಯದ ಕಬ್ಜಾ ಶರಣ್ ಮತ್ತು ಮಂಡ್ಯ ಕೆಂಪಣ್ಣ ಅವರು ಕೂಡ ಇವರೊಂದಿಗೆ ಮಾಗಡಿ ಸ್ಟೇಷನ್ ಗೆ ಬರುತ್ತಾರೆ. ಈ ಸಂದರ್ಭದಲ್ಲಿ ಇವರೆಲ್ಲರೂ ಒಂದೇ ಗ್ಯಾಂಗ್ ನವರು ಎಂದು ತಿಳಿದು ಗ್ರಾಮಸ್ಥರೆಲ್ಲರೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

You may also like