Actor Yash: ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟ ಯಶ್ (Actor Yash) ತಾಯಿ ಪುಷ್ಪಾ ಅವರಿಗೆ ಕೋರ್ಟ್ ಶಾಕ್ ಕೊಟ್ಟಿದೆ. ಬೇರೆಯವರ ಜಾಗದಲ್ಲಿ ನಿರ್ಮಿಸಿದ್ದಾರೆ ಎನ್ನಲಾದ ಕಾಂಪೌಂಡ್‌ನ್ನು ಧ್ವಂಸಗೊಳಿಸಲಾಗಿದೆ.
ಹಾಸನ (Hassan) ನಗರದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇದೆ. ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮೂಲ ಮಾಲೀಕ ಧ್ವಂಸಗೊಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದಾರೆ. 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪ ಇವರ ಮೇಲಿದೆ. ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿದೆ. ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಲಾಗಿತ್ತು. ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಮಾಲೀಕ ದೇವರಾಜು ಕಿಡಿಕಾರಿದ್ದಾರೆ.
ನ್ಯಾಯಾಲಯದ ಅನುಮತಿಯ ಮೇರೆಗೆ ಜಿಪಿಎ ಹೋಲ್ಡರ್ ಅಕ್ರಮ ಕಾಂಪೌಂಡ್ ತೆರವುಗೊಳಿಸಿದ್ದಾರೆ.ಅಕ್ರಮವಾಗಿ ಗೋಡೆ ನಿರ್ಮಿಸಿದ್ದರು ಎಂದು ಜಾಗದ ಮಾಲೀಕರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಇವರ ಆರೋಪಗಳನ್ನು ಯಶ್ ತಾಯಿ ಪುಷ್ಪಾ ಅವರು ಅಲ್ಲಗಳೆದಿದ್ದಾರೆ.
