15
Udupi: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಣಿಪಾಲ ಹೆಜ್ಜೆ-ಗೆಜ್ಜೆ ಫೌಂಡೇಶನ್ ವತಿಯಿಂದ, ಶನಿವಾರ ಬೆಳಗ್ಗೆ 8.58ಕ್ಕೆ ಪುರಂದರದಾಸ ರಚಿತ ಗಜ ವದನ ಬೇಡುವೆ ಕೃತಿಯನ್ನು ಹಾಡುತ್ತ ನರ್ತನ ಆರಂಭಿಸಿದ ದೀಕ್ಷಾ ನಿರಂತರವಾಗಿ ಗಾನ-ಭಾವ-ಅಭಿನಯ ಪ್ರಸ್ತುತಪಡಿಸಿದರು.
ಸತತ 6ಗಂಟೆ 13 ನಿಮಿಷಗಳ ಕಾಲ ಹಾಡುತ್ತ-ಕುಣಿಯುತ್ತ ಪುರಂದರ ಗಾನ ನರ್ತನದ ಮೂಲಕ ದೀಕ್ಷಾ ರಾಮಕೃಷ್ಣ(31) ನೂತನ ವಿಶ್ವ ದಾಖಲೆ ಬರೆದಿದ್ದಾರೆ. ತಬಲಾದಲ್ಲಿ ವಿದುಷಿ ವಿಜೇತಾ ಹೆಗಡೆ ಕೆರೆಮನೆ ಹಾಗೂ ಹಾರ್ಮೋನಿಯಂನಲ್ಲಿ ವಿದ್ವಾನ್ ಸತೀಶ್ ಭಟ್ ಹೆಗ್ಗಾರ್ ಸಾಥ್ ನೀಡಿದರು. ಸಂಜೆ ಪ್ರಮಾಣ ಪತ್ರ, ಪದಕ, ಲಾಂಛನವನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದರ ಏಶ್ಯಾ ಮುಖ್ಯಸ್ಥ ಡಾ. ಮನೀಶ್ ಬಿಷ್ಟೋಯ್ ಹಸ್ತಾಂತರಿಸಿದರು.
