Ballary : ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ಮಾರಾಮಾರಿ ವೇಳೆ ಬುಲೆಟ್ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗೆ ತಗುಲಿದ ಗುಂಡಿನ ರಹಸ್ಯ ಇದೀಗ ಬಯಲಾಗಿದೆ.
ಹೌದು, ಬಳ್ಳಾರಿ (Bellary) ಗಲಭೆ ಕೇಸ್ ವಿಚಾರವಾಗಿ ರಾಜಕೀಯ (Politics ) ಸಂಘರ್ಷ ಜೋರಾಗಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗ್ತಿದೆ. ಈ ನಡುವೆ ಕೈ ಕಾರ್ಯಕರ್ತ ರಾಜಶೇಖರ್ ಸಾವಿಗೆ ಕಾರಣವಾದ ಬುಲೆಟ್ ಕುರಿತು ಸ್ಫೋಟಕ ಮಾಹಿತಿ ಬಯಲಾಗಿದೆ.
ಯಸ್, ಸತೀಶ್ ರೆಡ್ಡಿ ಗನ್ ಮ್ಯಾನ್ ಫೈರ್ ಮಾಡಿದ್ದ ಬಂದೂಕಿನ ಬುಲೆಟ್ ತಗುಲಿಯೇ ಯುವಕ ರಾಜಶೇಖರ್ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ. ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ ಕೂಡ ಬಳಸಿರೋದು ಇದೇ ಗನ್ ಆಗಿದೆ. ಪ್ರಕರಣ ಸಂಬಂಧ ಈಗಾಗಲೇ 5 ಗನ್ಗಳನ್ನು ಬ್ರೂಸ್ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಓರ್ವ ಗನ್ಮ್ಯಾನ್ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ನಾಲ್ವರು ಎಸ್ಕೇಪ್ ಆಗಿದ್ದಾರೆ.
ಇನ್ನೂ ಗಲಾಟೆ ಪ್ರಕರಣ ಸಂಬಂಧ ಎರಡೂ ಗುಂಪುಗಳ ಮೇಲೂ ಪೊಲೀಸರು FIR ದಾಖಲಿಸಿಕೊಂಡಿದ್ದು, 50ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ್ದಾರೆ. ಇಂದು ಮಧ್ಯಾಹ್ನದ ಒಳಗೆ ಪ್ರಮುಖ ಆರೋಪಿಗಳು ಸೇರಿ ಹಲವರ ಬಂಧನ ಸಾಧ್ಯತೆ ಇದೆ.
