21
Snake: ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಾನವ್ ಸೇವಾ ನಗರದ ನಿವಾಸಿ ಮಿಥಾಲಿ ಚತುರ್ವೇದಿ ಎಂಬುವವರ ಸ್ಕೂಟರ್ ಹೆಲ್ಮೆಟ್ ನಲ್ಲಿ ನಾಗರಹಾವು ಅಡಗಿಕುಳಿತಿದೆ.ಮಧ್ಯಾಹ್ನ ಸಮಯ ಸುಮಾರು 2 ಗಂಟೆ ಸುಮಾರಿಗೆ, ಮಿಥಾಲಿ ಕೆಲಸಕ್ಕೆ ಮನೆಯಿಂದ ಹೊರಡುವಾಗ ತಮ್ಮ ಬೈಕ್ ಹೆಲ್ಮೆಟ್ ನಲ್ಲಿ ವಿಷಪೂರಿತ ನಾಗರಹಾವು ಸುರುಳಿಯಾಗಿರುವುದನ್ನು ಕಂಡಿದ್ದಾರೆ.
ಹೆಲ್ಮೆಟ್ ಒಳಗೆ ನಾಗರಹಾವು ನೋಡಲು ಅನೇಕ ಜನರು ಮಿಥಾಲಿಯ ಮನೆಗೆ ಬಂದಿದ್ದು, ನಂತರ ಸ್ಥಳೀಯ ಸಂಸ್ಥೆ ವೈಲ್ಡ್ ಅನಿಮಲ್ಸ್ ಮತ್ತು ನೇಚರ್ ಹೆಲ್ಪಿಂಗ್ ಸೊಸೈಟಿಯ ಹಾವು ಹಿಡಿಯುವವರಾಗಿ ಕೆಲಸ ಮಾಡುವ ಶುಭಮ್ ಜಿ.ಆರ್ ಎಂಬ ಯುವಕನಿಗೆ ಮಾಹಿತಿ ನೀಡಿದರು. ನಂತರ ಹೆಲ್ಮೆಟ್‌ನಿಂದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದರು. ನಂತರ, ಹಾವನ್ನು ಕಾಡಿಗೆ ಬಿಡಲಾಯಿತು.
