Home » ‘ತಿಥಿʼ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ

‘ತಿಥಿʼ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ

0 comments

ತಿಥಿ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದ ಸಿಂಗ್ರಿಗೌಡ ನಿಧನ ಹೊಂದಿದ್ದಾರೆ. ಅವರಿಗೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜ.4 ರ ರಾತ್ರಿ ಕೊನೆಯುಸಿರೆಳೆದರು.

ಸೆಂಚುರಿ ಗೌಡ ಅವರು ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನವರು. ತಿಥಿ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಅವರಿಗೆ ಜನಪ್ರಿಯತೆಯನ್ನು ನೀಡಿತ್ತು. ಇದರಿಂದ ಅವರಿಗೆ ಬೇರೆ ಸಿನಿಮಾ ಆಫರ್‌ಗಳು ಬಂದವು. ಈ ಚಿತ್ರಕ್ಕಾಗಿ ಅವರಿಗೆ 20ಸಾವಿರ ಸಂಭಾವನೆ ದೊರಕಿತ್ತು ಎನ್ನಲಾಗಿದೆ.

You may also like