Home » ‘ಎಕ್ಸ್’ನಲ್ಲಿ ಕಾನೂನುಬಾಹಿರ ಪೋಸ್ಟ್ ಹಂಚಿಕೊಂಡರೆ ಖಾತೆ ಅಮಾನತು

‘ಎಕ್ಸ್’ನಲ್ಲಿ ಕಾನೂನುಬಾಹಿರ ಪೋಸ್ಟ್ ಹಂಚಿಕೊಂಡರೆ ಖಾತೆ ಅಮಾನತು

0 comments
Elon Musk

ಹೊಸದಿಲ್ಲಿ: ವೇದಿಕೆ ಮೈಕ್ರೋಬ್ಲಾಗಿಂಗ್ ‘ಎಕ್ಸ್‌’ನಲ್ಲಿ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಕೇಂದ್ರ ಸರಕಾರವು ನೋಟಿಸ್ ನೀಡಿದ ಬೆನ್ನಿಗೇ ಅಂತಹ ವಿಷಯಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು ಎಂದು ಉದ್ಯಮಿ ಎಲಾನ್ ಮಸ್ಕ್‌ ಒಡೆತನದ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಗೋಕ್’ ಬಳಸುವವರು ಅಶ್ಲೀಲ, ಕಾನೂನು ಬಾಹಿರ ವಿಷಯಗಳನ್ನು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದರೆ ಕಾನೂನು ಕ್ರಮ ಮೇಲಿನ ಎದುರಿಸಬೇಕಾಗುತ್ತದೆ. ಮಕ್ಕಳ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುವಂತಹ ಫೋಟೊ, ವಿಡಿಯೊಗಳನ್ನು ಪೋಸ್ಟ್ ಮಾಡುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ ಎಂದು ಕಂಪನಿ ಎಚ್ಚರಿಸಿದೆ.

ಕಳೆದ ಜ.2 ರಂದು ಐಟಿ ಸಚಿವಾಲಯವು ಎಐ ಅಪ್ಲಿಕೇಶನ್ ಪ್ರೋಕ್‌ನಿಂದ ರಚಿಸಲಾಗುವ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ, ಇಲ್ಲದಿದ್ದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಿತ್ತು. ಜತೆಗೆ ಈ ಕುರಿತು ಕ್ರಮ ಕೈಗೊಂಡ ಬಗ್ಗೆ ವಿವರವನ್ನು 72 ಗಂಟೆಯೊಳಗೆ” ಸಲ್ಲಿಸುವಂತೆ ಸಚಿವಾಲಯವು ಸಂಸ್ಥೆಗೆ ಸೂಚಿಸಿತ್ತು.

ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮಹಿಳೆಯರ ಅಶ್ಲೀಲ ಫೋಟೊಗಳನ್ನು ರಚಿಸಲು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಎಐ ಅಪ್ಲಿಕೇಶನ್ ‘ಗೋಕ್’ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ಗಮನಸೆಳೆದಿದ್ದರು.

You may also like