Ujire: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.7 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಮೂತ್ರರೋಗ ತಪಾಸಣಾ ಶಿಬಿರ ನಡೆಯಲಿದೆ.ಮೂತ್ರರೋಗ ತಜ್ಞರಾದ ಡಾ| ರೋಷನ್ ವಿ. ಶೆಟ್ಟಿ ಅವರು ರೋಗ ತಪಾಸಣೆ ನಡೆಸಲಿದ್ದಾರೆ.
ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿದ್ದು, ಪ್ರಯೋಗಾಲಯ, ರೇಡಿಯಾಲಜಿ ಮತ್ತು ಇತರೆ ಚಿಕಿತ್ಸಾ ಕ್ರಮಗಳಿಗೆ 20% ರಿಯಾಯಿತಿ ಔಷಧ ಮತ್ತು ಒಳರೋಗಿ ವಿಭಾಗದ ಶುಲ್ಕದಲ್ಲಿ 10% ರಿಯಾಯಿತಿ ದೊರೆಯಲಿದೆ.
ಮುಖ್ಯವಾಗಿ ಮೂತ್ರಪಿಂಡದ ಕಲ್ಲು ತಪಾಸಣೆ, ಪ್ರೋಸ್ಟೇಟ್ ಸಂಬಂಧಿತ ಸಮಸ್ಯೆಗಳು, ಮೂತ್ರಪಿಂಡದ ವೈಫಲ್ಯ ತಪಾಸಣೆ ಮತ್ತು ಇತರ ಎಲ್ಲಾ ತರಹದ ಮೂತ್ರನಾಳ ಸಂಬಂಧಿತ ಸಮಸ್ಯೆಗಳ ಸೇವೆಗಳು ಲಭ್ಯವಿದೆ. ಹೆಸರು ನೋಂದಾಯಿಸಲು 7760397878 ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
