Home » Spandana : ಸ್ಪಂದನಾಗೆ ಇದ್ದಾರಾ ಬಾಯ್ ಫ್ರೆಂಡ್? ಮದುವೆ ಗುಟ್ಟು ಈಗ ರಟ್ಟು

Spandana : ಸ್ಪಂದನಾಗೆ ಇದ್ದಾರಾ ಬಾಯ್ ಫ್ರೆಂಡ್? ಮದುವೆ ಗುಟ್ಟು ಈಗ ರಟ್ಟು

0 comments

Spandana: ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತ ತಲುಪಿದ್ದು ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ಕೂಡ ನಡೆಯಲಿದೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಆಗಿದ್ದ ಸ್ಪಂದನ ಸೋಮಣ್ಣ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನೆಲೆ ಅವರು ತಮ್ಮ ಬಾಯ್ ಫ್ರೆಂಡ್ ಕುರಿತು ಮಾತನಾಡಿದ್ದಾರೆ.

ಸ್ಪಂದನ ಸೋಮಣ್ಣ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾಗ ಹಲವಾರು ಯುವಕರ ಹೃದಯವನ್ನು ಕದ್ದಿದ್ದರು. ಅವರ ಅಂದ, ಚಂದವನ್ನು ನೋಡಿ, ಅವರ ಕ್ಯೂಟ್ನೆಸ್ ನೋಡಿ ವೋಟ್ ಮಾಡಿಯೇ ಅಭಿಮಾನಿಗಳು ಇಲ್ಲಿಯವರೆಗೂ ಅವರನ್ನು ಉಳಿಸಿಕೊಂಡು ಬಂದಿದ್ದರು. ಇದೀಗ ಅವರು ಎಲಿಮಿನೇಟ್ ಆದ ಬಳಿಕ ಮಾಧ್ಯಮಗಳು ಅವರನ್ನು ಸಂದರ್ಶನ ಮಾಡುತ್ತಿದ್ದು, ಈ ವೇಳೆ ಅವರು ಬಾಯ್ ಫ್ರೆಂಡ್ ಹಾಗೂ ಮದುವೆಯ ಕುರಿತು ಮಾತನಾಡಿದ್ದಾರೆ.

 ಹೌದು ಮಾಧ್ಯಮ ಒಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಸಂದರ್ಶಕರು ಸ್ಪಂದನ ಅವರಿಗೆ ಬಾಯ್ ಫ್ರೆಂಡ್ ಇದ್ದಾರಾ? ಮದುವೆ ಯಾವಾಗ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಇದಕ್ಕೆ ನಗುತ್ತಲೆ ಉತ್ತರಿಸಿದ ಸ್ಪಂದನ ಅವರು ಸ್ಪಂದನ ಅವರಿಗೆ ಬಾಯ್ ಫ್ರೆಂಡ್ ಇದ್ದಾರಾ ಅನ್ನೋದನ್ನು ಕಾಯ್ತಾ ಇರಿ, ನೋಡ್ತಾ ಇರಿ ಎಂದಷ್ಟೇ ಹಾರಿಕೆಯ ಉತ್ತರವನ್ನು ನೀಡಿದ್ದಾರೆ. ಅಲ್ಲದೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಇಲ್ಲ ಈಗ ಬಂದಿರುವ ಪೇಮ್ ಅನ್ನು ಎಂಜಾಯ್ ಮಾಡುತ್ತೇನೆ ಎಂದಷ್ಟೇ ಹೇಳಿದ್ದಾರೆ.

You may also like