Home » Ballary : ಬಳ್ಳಾರಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ – 2 ಬಾರಿ ಕೈ ಕಾರ್ಯಕರ್ತನ ಅರಣೋತ್ತರ ಪರೀಕ್ಷೆ ನಡೆಸಿದ್ದೇಕೆ?

Ballary : ಬಳ್ಳಾರಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ – 2 ಬಾರಿ ಕೈ ಕಾರ್ಯಕರ್ತನ ಅರಣೋತ್ತರ ಪರೀಕ್ಷೆ ನಡೆಸಿದ್ದೇಕೆ?

0 comments

Ballary : ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ, ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರು. ಇದೀಗ ರಾಜಶೇಖರ್ ಅವರ ಮೃತ ದೇಹಕ್ಕೆ ಎರಡೆರಡು ಬಾರಿ ಮರಣಹತ್ತರ ಪರೀಕ್ಷೆ ನಡೆಸಲಾಗಿದೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಹೌದು, ರಾಜಶೇಖರ ಪೋಸ್ಟ್ ಮಾರ್ಟಂ ಹಾಗೂ ವೈದ್ಯರ ನಡೆ ತೀವ್ರ ಅನುಮಾನ ಗುಡಿಸಿದ್ದು ರಾಜಕೀಯ ಒತ್ತಡಕ್ಕೆ ಮಾಡಿದ ವೈದ್ಯರು ಈ ಒಂದು ರಾಜಶೇಖರ್ ಸಾವಿನ ಸಾಕ್ಷಿ ನಾಶ ಮಾಡಲು ಬಂದಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಫೈರಿಂಗ್ ಪ್ರಕರಣವನ್ನು ಮುಚ್ಚಿಹಾಕಲು ಷಡ್ಯಂತರ ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.  ಅದೇನೆಂದರೆ ರಾಜಶೇಖರ್ ದೇಹವನ್ನು ಡಬಲ್ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಎರಡೆರಡು ಬಾರಿ ರಾಜಶೇಖರ ಪೋಸ್ಟ್ ಮಾರ್ಟಂ ನಡೆದಿತ್ತು ರಾಜಶೇಖರ್ ದೇಹದಲ್ಲಿಯೇ ವೈದ್ಯರು ಬುಲೆಟ್ ಬಿಟ್ಟಿದ್ದರು. ರಾಜಕೀಯ ಒತ್ತಡಕ್ಕೆ ಸಿಲುಕಿ ವೈದ್ಯರು ಗುಂಡು ಹೊರಗಡೆ ತೆಗೆದಿರಲಿಲ್ಲ. ಮೊದಲು ಶವ ಪರೀಕ್ಷೆಯಲ್ಲಿ ಬುಲೆಟ್ ವೈದ್ಯರು ಹೊರಗಡೆ ತೆಗೆಯಲಿಲ್ಲ. ರಾಜಶೇಖರ್ ದೇಹದಲ್ಲಿ ವೈದ್ಯರು ಬುಲೆಟ್ ಬಿಟ್ಟಿದ್ದರು. ನಂತರ ಅನುಮಾನ ಗಂಡ ಪೊಲೀಸರು ಎರಡನೇ ಬಾರಿ ಪೋಸ್ಟ್ ಮಾರ್ಟಾಂಗೆ ಮುಂದಾದರು.

ಪೊಲೀಸರ ನಿರ್ದೇಶನದಂತೆ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಬುಲೆಟ್ ಅನ್ನು ಹೊರತೆಗೆದುಕೊಳ್ಳಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆ ರಾಜಶೇಖರ್ ಸಾವಿನ ಸಾಕ್ಷಿಗಳನ್ನು ನಾಶಪಡಿಸಲು ನಡೆದ ಪ್ರಯತ್ನವೇ ಎಂಬ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಸದ್ಯವೈದ್ಯರ ನಡೆ ಹಾಗೂ ಪ್ರಕರಣದ ಹಿನ್ನಲೆಯಲ್ಲಿ ನಡೆದಿರುವ ಸಾಧ್ಯತೆಯಿರುವ ರಾಜಕೀಯ ಹಸ್ತಕ್ಷೇಪದ ಕುರಿತು ಸಮಗ್ರ ತನಿಖೆ ನಡೆಯಬೇಕೆಂಬ ಒತ್ತಾಯ ಇದೀಗ ಹೆಚ್ಚುತ್ತಿದೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. 

You may also like