Home » Dharwada: ಧಾರವಾಡದಲ್ಲೊಂದು ಅಪರೂಪದ ಘಟನೆ – ಬಸ್ ಡಿಪೋದಲ್ಲಿ ಹನುಮಾನ್ ದೇವಾಲಯ ನಿರ್ಮಿಸಿದ ಮುಸ್ಲಿಂ ವ್ಯಕ್ತಿ!

Dharwada: ಧಾರವಾಡದಲ್ಲೊಂದು ಅಪರೂಪದ ಘಟನೆ – ಬಸ್ ಡಿಪೋದಲ್ಲಿ ಹನುಮಾನ್ ದೇವಾಲಯ ನಿರ್ಮಿಸಿದ ಮುಸ್ಲಿಂ ವ್ಯಕ್ತಿ!

0 comments

Dharwada : ಧಾರವಾಡದದಲ್ಲೊಂದು ಅಪರೂಪದ ಘಟನೆ ನಡೆದಿದ್ದು  ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಮುಸ್ಲಿಂ ವ್ಯಕ್ತಿ ಒಬ್ಬರು ಭಾರಿ ವಿರೋಧದ ನಡುವೆಯೂ ಹನುಮಾನ್ ದೇವಾಲಯವನ್ನು ನಿರ್ಮಿಸಿ ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ. 

ಯಸ್, ಧಾರವಾಡದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKSRTC) ಭದ್ರತಾ ವಿಭಾಗದಲ್ಲಿ ಮುಸ್ಲಿಂ ಕಾನ್‌ಸ್ಟೆಬಲ್ ಆಗಿರುವ ಲಾಲ್‌ಸಾಬ್ ರಸಲ್‌ಸಾಬ್ ಬುದಿಹಾಳ್ ಹನುಮಂತನಿಗೆ ಮೀಸಲಾದ ದೇವಾಲಯವನ್ನು ನಿರ್ಮಿಸಿದ್ದಾರೆ. 60 ವರ್ಷದ ಲಾಲ್‌ಸಾಬ್ ರಸಲ್‌ಸಾಬ್ ಬುದಿಹಾಳ್ ತಮ್ಮ ಸಮುದಾಯದ ಮುಖಂಡರು ಮತ್ತು ನಿಗಮದ ಉನ್ನತ ಅಧಿಕಾರಿಗಳ ವಿರೋಧದ ನಡುವೆಯೂ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ ಅವರು ಈ ದೇವಾಲಯ ನಿರ್ಮಾಣಕ್ಕೆ ತಮ್ಮ ಸ್ವಂತ ಹಣದಿಂದ ಮತ್ತು ಇಲಾಖೆಯಲ್ಲಿನ ತಮ್ಮ ಸಹೋದ್ಯೋಗಿಗಳ ಸಹಾಯದಿಂದ ದೇವಾಲಯ ನಿರ್ಮಿಸಿದ್ದಾರೆ.  

ಈ ಕುರಿತಾಗಿ ಮಾತನಾಡಿದ ಅವರು ನಾನು ಹೊಸ ಡಿಪೋದಲ್ಲಿ ಕೆಲಸದಲ್ಲಿದ್ದಾಗ, ವಾಹನ ನಿಲುಗಡೆ ಸ್ಥಳದಲ್ಲಿ ವಿಗ್ರಹ ಬಿದ್ದಿರುವುದನ್ನು ನಾನು ನೋಡಿದೆ. ದೇವರನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ನನಗೆ ನೋವುಂಟು ಮಾಡಿತು. ಹೀಗಾಗಿ ನಾನು ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದೆ. ನನ್ನ ಈ ಕಾರ್ಯಕ್ಕೆ ಅನೇಕ ಉದ್ಯೋಗಿಗಳು ವಿರೋಧ ವ್ಯಕ್ತಪಡಿಸಿದರೆ ಕೆಲವರು ಸಹಕಾರ ನೀಡಿದರು. ಇದು ಕೇವಲ ದೇವಾಲಯವಲ್ಲ, ಇದು ಸಹೋದರತ್ವ ಮತ್ತು ಇತರ ಧರ್ಮಗಳ ಬಗ್ಗೆ ಇರುವ ಗೌರವದ ಸಂಕೇತವಾಗಿದೆ ಎಂದು ಅವರು ಹೇಳಿದರು.

You may also like