Home » Pension : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – 50% ಪೆನ್ಷನ್ ಘೋಷಿಸಿದ ಸರ್ಕಾರ

Pension : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – 50% ಪೆನ್ಷನ್ ಘೋಷಿಸಿದ ಸರ್ಕಾರ

0 comments

Pension : ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು 50% ಪೆನ್ಷನ್ ಘೋಷಿಸಿದೆ. ಆದರೆ ಇದು ನಮ್ಮ ಕರ್ನಾಟಕ ಸರ್ಕಾರ ಘೋಷಿಸಿರುವುದಲ್ಲ ಬದಲಿಗೆ ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಈ ಹೊಸ ಘೋಷಣೆ ಮಾಡಿದೆ.

ಹೌದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್,ಸರಕಾರಿ ನೌಕರರಿಗೆ ಅವರು ಕೊನೆಯದಾಗಿ ಪಡೆದ ವೇತನದ ಶೇ.50 ಅನ್ನು ಮಾಸಿಕ ಪಿಂಚಣಿಯಾಗಿ ನೀಡುವ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೊಳಿಸಿದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ತರುವುದಾಗಿ ಆಡಳಿತರೂಢ ಸರ್ಕಾರ ಹಿಂದೆ ಘೋಷಿಸಿತ್ತು. ಅಂತಯೇ ಇದೀಗ ಸರ್ಕಾರ ತಾನು ಮಾತು ಕೊಟ್ಟಂತೆ ನಡೆದುಕೊಂಡಿದೆ.

ನಿವೃತ್ತರಾಗುತ್ತಿರುವ ನೌಕರರಿಗೆ ಗರಿಷ್ಠ 25 ಲಕ್ಷ ರೂ. ಗ್ರ್ಯಾಚ್ಯುಟಿ ಸಿಗಲಿದೆ. ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರಂತೆ ನಿವೃತ್ತ ನೌಕರರು ಕೂಡ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಪಡೆಯಲಿದ್ದಾರೆ. ಈ ಯೋಜನೆ ಹಳೆಯ ಯೋಜನೆ ಅಲ್ಲದಿದ್ದರೂ ಅದೇ ಸೌಲಭ್ಯಗಳನ್ನು ಹೊಂದಿದೆ ಎಂದು ಸರಕಾರ ಪ್ರತಿಪಾದಿಸಿದೆ.

You may also like