Home » ಬಾಂಗ್ಲಾದೇಶದಲ್ಲಿ ಹಿಂದೂ ಅಂಗಡಿ ಮಾಲೀಕನ ಹತ್ಯೆ, 3 ವಾರಗಳಲ್ಲಿ 6ನೇ ಸಾವು

ಬಾಂಗ್ಲಾದೇಶದಲ್ಲಿ ಹಿಂದೂ ಅಂಗಡಿ ಮಾಲೀಕನ ಹತ್ಯೆ, 3 ವಾರಗಳಲ್ಲಿ 6ನೇ ಸಾವು

0 comments

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆಯಾಗಿದ್ದು, ದೇಶದಲ್ಲಿ ನಿರಂತರ ಅಶಾಂತಿಯ ನಡುವೆ ಕೇವಲ 18 ದಿನಗಳಲ್ಲಿ ಸಮುದಾಯದ ಸದಸ್ಯರ ಮೇಲೆ ನಡೆದ ಆರನೇ ಮಾರಕ ದಾಳಿ ಇದಾಗಿದೆ.

ಸೋಮವಾರ ಸಂಜೆ ಜಶೋರ್ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಣಿರಾಂಪುರ ಉಪಜಿಲ್ಲಾದ ವಾರ್ಡ್ ನಂ. 17 ರ ಕೋಪಲಿಯಾ ಬಜಾರ್‌ನಲ್ಲಿ ಸಂಜೆ 5:45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಾವಿಗೀಡಾದ ರಾಣಾ ಪ್ರತಾಪ್, 45, ತುಷಾರ ಕಾಂತಿ ಬೈರಾಗಿ ಅವರ ಮಗ ಮತ್ತು ಕೇಶಬಪುರದ ಅರುವಾ ಗ್ರಾಮದ ನಿವಾಸಿ.

ನರಸಿಂಗ್ಡಿ ಜಿಲ್ಲೆಯ ಚಾರ್ಸಿಂದೂರ್ ಬಜಾರ್‌ನಲ್ಲಿ ಸೋಮವಾರ ರಾತ್ರಿ ದಿನಸಿ ವ್ಯಾಪಾರಿ ಮಣಿ ಚಕ್ರವರ್ತಿ ಹತ್ಯೆಗೀಡಾಗಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಪಲಾಶ್ ಉಪಜಿಲ್ಲಾದ ಜನನಿಬಿಡ ಮಾರುಕಟ್ಟೆಯಲ್ಲಿ ಚಕ್ರವರ್ತಿ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ, ಆದರೆ ದಾರಿ ಮಧ್ಯೆ ಅವರು ಸಾವಿಗೀಡಾದರು.

ಮಣಿ ಚಕ್ರವರ್ತಿ ಶಿಬ್‌ಪುರ ಉಪಜಿಲ್ಲಾದ ಸಧಾರ್ಚಾರ್ ಯೂನಿಯನ್ ನಿವಾಸಿ ಮತ್ತು ಮದನ್ ಠಾಕೂರ್ ಅವರ ಮಗ. ಪುನರಾವರ್ತಿತ ದಾಳಿಗಳು ಅಭದ್ರತೆಯನ್ನು ಸೃಷ್ಟಿಸುತ್ತಿವೆ ಎಂದು ಎಚ್ಚರಿಸಿರುವ ಸಮುದಾಯದ ಸದಸ್ಯರು, ಇದಕ್ಕೆ ಕಾರಣರಾದವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

You may also like