Home » KSRTC: KSRTC ಯಿಂದ ಗುಡ್‌ನ್ಯೂಸ್: ಬಸ್‌ಗಳ ಟಿಕೆಟ್ ದರ 5-10% ಕಡಿತ

KSRTC: KSRTC ಯಿಂದ ಗುಡ್‌ನ್ಯೂಸ್: ಬಸ್‌ಗಳ ಟಿಕೆಟ್ ದರ 5-10% ಕಡಿತ

0 comments
KSRTC

KSRTC: ಕೆಎಸ್‌ಆರ್‌ಟಿಸಿ (KSRTC) ಪ್ರಯಾಣಿಕರಿಗೆ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಇಂದಿನಿಂದ ಮಾರ್ಚ್‌ವರೆಗೆ ಪ್ರೀಮಿಯರ್ ಬಸ್‌ಗಳ ಆಯ್ದ ಮಾರ್ಗಗಳಲ್ಲಿ 5% ರಿಂದ 15% ಟಿಕೆಟ್ ದರ ಕಡಿತ ಮಾಡಿದೆ.

ಕೆಎಸ್‌ಆರ್‌ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್‌ಗಳ ಪ್ರಯಾಣ ದರಗಳಲ್ಲಿ 5-15% ರಿಯಾಯಿತಿ ಘೋಷಿಸಿದೆ. ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಿರುವ ಹಿನ್ನಲೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಆದರೆ ಈ ದರ ವಾರದ ದಿನಗಳಲ್ಲಿ ಮಾತ್ರ ಅನ್ವಯವಾಗುತ್ತದೆ. ವಾರಂತ್ಯಗಳಲ್ಲಿ ಅನ್ವಯಿಸುವುದಿಲ್ಲ. ವೋಲ್ವೋ, ಅಂಬಾರಿ, ಕ್ಲಬ್ ಕ್ಲಾಸ್, ಪಲ್ಲಕಿ ಉತ್ಸವ, ಫ್ಲೈ ಬಸ್, ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಟಿಕೆಟ್ ದರವನ್ನು ಆಯ್ದ ಮಾರ್ಗಗಳಲ್ಲಿ ಕಡಿಮೆ ಮಾಡಲಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ವಿಭಾಗಗಳಲ್ಲೂ ದರ ಅನ್ವಯವಾಗಲಿದೆ.

ಜೊತೆಗೆ ಬೆಂಗಳೂರಿನಿಂದ ಇತರ ರಾಜ್ಯಗಳಿಗೆ ಹೊರಡುವ ತಿರುಪತಿ, ಹೈದರಾಬಾದ್, ಪಾಂಡಿಚೇರಿ, ಊಟಿ, ಚೆನೈ ಸೇರಿದಂತೆ ಇಂಟರ್ ಸ್ಟೇಟ್ ಪ್ರೀಮಿಯರ್ ಬಸ್‌ಗಳ ದರ ಕಡಿತವಾಗಿದೆ. ಪ್ರಮುಖವಾಗಿ ಬೆಂಗಳೂರು ಏರ್‌ಪೋರ್ಟ್‌ಗೆ ಫ್ಲೈ ಬಸ್‌ಗಳ ದರವೂ ಇಳಿಕೆಯಾಗಿದೆ.

ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆ ಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೊಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಡಿಮೆ ಮಾಡಲಾಗಿದೆ.

ಯಾವ ಮಾರ್ಗಕ್ಕೆ ಎಷ್ಟು?

ಹಳೆಯ ದರ ಹೊಸ ದರ

* ಬೆಂಗಳೂರು ಏರ್‌ಪೋರ್ಟ್ -ಕುಂದಾಪುರ-2300 ರೂ.-2000 ರೂ.

* ಬೆಂಗಳೂರು ಏರ್‌ಪೋರ್ಟ್ -ಮಣಿಪಾಲ್- 2200 ರೂ.-1950 ರೂ.

* ಬೆಂಗಳೂರು ಏರ್‌ಪೋರ್ಟ್ -ಮಂಗಳೂರು-2140 ರೂ.-1850 ರೂ.

ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಪ್ರೀಮಿಯರ್ ಬಸ್ ದರ

* ಬೆಂಗಳೂರು-ಶಿರಡಿ- 2,500 ರೂ. -2,000 ರೂ.

* ಬೆಂಗಳೂರು-ಮುಂಬೈ-2,500 ರೂ.-2,000 ರೂ.

* ಬೆಂಗಳೂರು -ಪುಣೆ-2,300 ರೂ. -1700 ರೂ.

* ಬೆಂಗಳೂರು -ಮುರುಡೇಶ್ವರ(ಅಂಬಾರಿ ಉತ್ಸವ)-1,900 ರೂ.-1,700 ರೂ.

* ಅಂಬಾರಿ ಡ್ರೀಮ್ ಕ್ಲಾಸ್-1,800 ರೂ.-1,500 ರೂ.

You may also like