Home » High Court : ಸುಮ್ ಸುಮ್ನೆ ಗಂಡನ ಮನೆಯವರ ಮೇಲೆ ಕೇಸ್ ಹಾಕೋ ಸೊಸೆಯರೇ ಹುಷಾರ್ – ಹೈಕೋರ್ಟ್ ನಿಂದ ಮಹತ್ವದ ತೀರ್ಪು

High Court : ಸುಮ್ ಸುಮ್ನೆ ಗಂಡನ ಮನೆಯವರ ಮೇಲೆ ಕೇಸ್ ಹಾಕೋ ಸೊಸೆಯರೇ ಹುಷಾರ್ – ಹೈಕೋರ್ಟ್ ನಿಂದ ಮಹತ್ವದ ತೀರ್ಪು

0 comments

High Court : ಇಂದು ಗಂಡನ ಮನೆಯಲ್ಲಿ ಹೊಂದಾಣಿಕೆ ಬರದಿದ್ದರೆ ಅಥವಾ ಏನಾದರೂ ಸಣ್ಣಪುಟ್ಟ ಜಗಳ ಉಂಟಾದರೆ ಹೆಂಡತಿಯರು ಸುಮ್ ಸುಮ್ನೆ ಅತ್ತೆ ಮಾವ ಹಾಗೂ ಗಂಡ ಮೇಲೆ ವರದಕ್ಷಿಣೆ ಕಿರುಕುಳ, ದೌರ್ಜನ್ಯ ಆರೋಪದಡಿ ಪ್ರಕರಣವನ್ನು ದಾಖಲಿಸುತ್ತಾರೆ. ಆದರೆ ಇನ್ನು ಮುಂದೆ ಹೀಗೆ ನಿರ್ದಿಷ್ಟ ಪ್ರಕರಣವಿಲ್ಲದೆ ಗಂಡನ ಮನೆಯವರ ಮೇಲೆ ಸುಳ್ಳು ಆರೋಪದಡಿ ಪ್ರಕರಣವನ್ನು ದಾಖಲಿಸಿದ್ರೆ ಅಂತಹ ಸೊಸೆಯವರ ಮೇಲೆ ಕ್ರಮವನ್ನು ಕೈಗೊಳ್ಳುವಂತೆ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಪತ್ನಿ ಅಬೇದಾ ಅವರ ಪತಿ ಮೊಹಮ್ಮದ್‌ ನೂರುದ್ದೀನ್‌ ಜುಮ್ನಾ ಮತ್ತಿತರ ಐವರ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸಿ, ಆ ವಿಚಾರಣೆ ರದ್ದುಗೊಳಿಸುವಾಗ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠ (ಕಲಬುರಗಿ), ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಯಾವುದೇ ನಿರ್ದಿಷ್ಟ ಪ್ರಕರಣವಿಲ್ಲದೆ ಅತ್ತೆ-ಮಾವ, ಪತಿ ‘ಪ್ರಚೋದಿಸಿದ್ದಾರೆ’ ಅಥವಾ ನಿಂದನೀಯ ಭಾಷೆ ಬಳಸಿದ್ದಾರೆಂಬ ಕೇವಲ ಹೇಳಿಕೆಯು ಕ್ರಿಮಿನಲ್‌ ಮೊಕದ್ದಮೆಗೆ ಮೂಲವಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ, ನ್ಯಾಯಾಲಯವು ತನ್ನ ಅಂತರ್ಗತ ನ್ಯಾಯವ್ಯಾಪ್ತಿ ಚಲಾಯಿಸಲು ನಿರಾಕರಿಸಿದೆಯಲ್ಲದೆ, ಅರ್ಜಿದಾರರು ಅನಗತ್ಯವಾಗಿ ಕ್ರಿಮಿನಲ್‌ ಮೊಕದ್ದಮೆಯ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಿದೆ.

You may also like