ಮಂಗಳೂರು: ನಗರದ ಪ್ರತಿಷ್ಠಿತ ಶಾರದಾ ಪಿಯು ಕಾಲೇಜು, ಕೋಡಿಯಾಲ್ಬೈಲ್, ಮಂಗಳೂರು ಇವರು ‘ವಾಣಿಜ್ಯ ಶ್ರೇಷ್ಠತೆಯ ಹಾದಿ’ (PATHWAY TO COMMERCE EXCELLENCE) ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಮಕ್ಕಳಿಗೆ ಎಸ್ ಎಸ್ ಎಲ್ ಸಿ ನಂತರ ಕಾಮರ್ಸ್ ವಿಭಾಗದಲ್ಲಿ ಇರುವ ಅವಕಾಶಗಳನ್ನು ಅರಿತುಕೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ ಎಂದು ಶಾರದಾ ಪಿಯು ಕಾಲೇಜಿನ ಪ್ರಕಟಣೆ ತಿಳಿಸಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ ರಮ್ಯಾ ರಾವ್, ಸಿಎ ವಿನಾಯಕ ಪೈ.ಕೆ. (ಐಸಿಎಐ ಮಂಗಳೂರು ಶಾಖೆಯ ಎಸ್ ಐಆರ್ ಸಿ) ಇವರುಗಳು ಸಂವಾದಾತ್ಮಕವಾದ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಲಾಭ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ವಿವರ:
ದಿನಾಂಕ: ಜನವರಿ 10, 2026, ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 4.30 ರವರೆಗೆ
ಸ್ಥಳ: ಧ್ಯಾನ ಮಂದಿರ, ಶಾರದಾ ಪಿಯು ಕಾಲೇಜು, ಕೋಡಿಯಾಲ್ಬೈಲ್, ಮಂಗಳೂರು
ಸಂಪನ್ಮೂಲ ವ್ಯಕ್ತಿಗಳು: ಸಿಎ ರಮ್ಯಾ ರಾವ್, ಸಿಎ ವಿನಾಯಕ ಪೈ ಕೆ (ಐಸಿಎಐ ಮಂಗಳೂರು ಶಾಖೆಯ ಎಸ್ ಐಆರ್ ಸಿ)
ಕಾರ್ಯಕ್ರಮದ ಮುಖ್ಯಾಂಶಗಳು:
- ವಾಣಿಜ್ಯ ಕ್ಷೇತ್ರದಲ್ಲಿ ಎಸ್ಎಸ್ಎಲ್ಸಿ/ಸಿಬಿಎಸ್ಇ (10″) ನಂತರ ವೃತ್ತಿ ಅವಕಾಶಗಳು.
- ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದಾತ್ಮಕ ಅಧಿವೇಶನ.
ಗಮನಿಸಿ:
- ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಒದಗಿಸಲಾಗುವುದು
- ಪೋಷಕರು ತಮ್ಮ ಮಕ್ಕಳೊಂದಿಗೆ ಬರಬಹುದು
- ಜನವರಿ 8, 2026 ರ ಮೊದಲು ನೋಂದಾಯಿಸಿಕೊಳ್ಳಲು ಕೋರಲಾಗಿದೆ. Phone no: 94801 59028, 74838 17602. Email: sharadapuc@gmail.com.
