Shocking : ಇಂದು ವೈದ್ಯ ಲೋಕದಲ್ಲಿ ವೈದ್ಯರ ಕಲ್ಪನೆಗೂ ನಿಲುಕ ದಂತಹ ಅಚ್ಚರಿಯ ಘಟನೆಗಳು ಸಂಭವಿಸುವುದನ್ನು ಕಾಣುತ್ತಿದ್ದೇವೆ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಸುಮಾರು 82 ವರ್ಷದ ಹೊಟ್ಟೆ ನೋವೆಂದು ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಚೆಕಪ್ ಮಾಡುವಾಗ ಅವರ ಹೊಟ್ಟೆಯಲ್ಲಿ ಬರೋಬ್ಬರಿ 40 ವರ್ಷದ ಮಗು ಇರಬಹುದು ಪತ್ತೆಯಾಗಿದೆ.
ಹೌದು, ಕೊಲಂಬಿಯಾದಲ್ಲಿ ಇಂತಹ ಅಪರೂಪದ, ಆಘಾತಕಾರಿ ಪ್ರಕರಣ ಸಂಭವಿಸಿದೆ. 82 ವರ್ಷದ ಒಬ್ಬರು ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಮೊದಲಿಗೆ ಇದು ವಯೋ ಸಹಜ ಕಾಯಿಲೆ ಇರಬಹುದು ಅಥವಾ ಗ್ಯಾಸ್ಟ್ರಿಕ್ ಏನಾದರೂ ಆಗಿದೆ ಎಂದು ಎಲ್ಲರೂ ವಹಿಸಿದ್ದಾರೆ. ಕೊನೆಗೆ ನೋವಿನಿಂದ ಬಳಲುತ್ತಿದ್ದ ಅಜ್ಜಿಯ ರೋಧನೆಯನ್ನು ತಡೆದುಕೊಳ್ಳಲಾಗದೆ ಮನೆಯವರು ಬೊಗೋಟಾದ ಆಸ್ಪತ್ರೆಗೆ ದಾಖಲಿಸಲಾಯಿತು.
ಮೊದಲು ಪರೀಕ್ಷೆ ನಡೆಸಿದ ವೈದ್ಯರು ಅಜ್ಜಿಯ ಹೊಟ್ಟೆಯೊಳಗೆ ಏನಾದರೂ ಗಡ್ಡೆ ಇರಬಹುದು ಎಂದು ಅಂದಾಜಿಸಿದ್ದಾರೆ. ಆದಾಗ್ಯೂ, CT ಸ್ಕ್ಯಾನ್ ಮತ್ತು ಎಕ್ಸ್-ರೇ ಮಾಡಿದ ನಂತರ, ಇಡೀ ವೈದ್ಯಕೀಯ ತಂಡವು ಆಶ್ಚರ್ಯಚಕಿತವಾಗಿದೆ. ಕಾರಣ ಅಜ್ಜಿಯ ಹೊಟ್ಟೆಯಲ್ಲಿ ಯಾವುದೇ ಗೆಡ್ಡೆ ಇಲ್ಲ, ಅಲ್ಲಿರುವುದು 40 ವರ್ಷ ವಯಸ್ಸಿನ ಭ್ರೂಣ ಸಂಪೂರ್ಣವಾಗಿ ಕ್ಯಾಲ್ಸಿಫೈಡ್ ಮತ್ತು ಕಲ್ಲಿನಂತೆ ಕಂಡುಬಂದಿದೆ. ವೈದ್ಯಕೀಯ ಪರಿಭಾಷೆಯಲ್ಲಿ, ಈ ಸ್ಥಿತಿಯನ್ನು “ಲಿಥೋಪೀಡಿಯನ್” ಅಥವಾ “ಕಲ್ಲಿನ ಮಗು” ಎಂದು ಕರೆಯಲಾಗುತ್ತದೆ.
ವಿಶ್ವಾದ್ಯಂತ 300 ಪ್ರಕರಣಗಳು ಪತ್ತೆ:
ಎಬಿಸಿ ನ್ಯೂಸ್, ಸಿಬಿಎಸ್ ನ್ಯೂಸ್ ಮತ್ತು ಮೆಡಿಕಲ್ ಡೈಲಿ ವರದಿಗಳ ಪ್ರಕಾರ, ಮಹಿಳೆಗೆ ಹೊಟ್ಟೆ ನೋವು ಹೊರತುಪಡಿಸಿ ಯಾವುದೇ ಗಂಭೀರ ಸಮಸ್ಯೆಗಳಿರಲಿಲ್ಲ. ಇದು ಲಿಥೋಪೀಡಿಯಾ ಪ್ರಕರಣ ಎಂದು ವೈದ್ಯರು ದೃಢಪಡಿಸಿದರು, ಇದು ವಿಶ್ವಾದ್ಯಂತ 300 ಮಹಿಳೆಯರಲ್ಲಿ ಪತ್ತೆಯಾಗಿದೆ.
ಲಿಥೋಪೀಡಿಯಾ ಎಂದರೇನು?
ವೈದ್ಯರ ಪ್ರಕಾರ, ಗರ್ಭಾವಸ್ಥೆಯು ಅದರ ಸಾಮಾನ್ಯ ಸ್ಥಳದ ಬದಲಿಗೆ ಹೊಟ್ಟೆಯಲ್ಲಿ ಸಂಭವಿಸಿದಾಗ ಈ ಸ್ಥಿತಿ ಉಂಟಾಗುತ್ತದೆ, ಇದನ್ನು ಅಪಸ್ಥಾನೀಯ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಭ್ರೂಣವು ಬದುಕಲು ಸಾಧ್ಯವಿಲ್ಲ ಮತ್ತು ದೇಹವು ಅದನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಸೋಂಕಿನಿಂದ ರಕ್ಷಿಸಲು, ದೇಹವು ಸ್ವಯಂಚಾಲಿತವಾಗಿ ಭ್ರೂಣದ ಸುತ್ತಲೂ ಕ್ಯಾಲ್ಸಿಯಂ ಲೇಪನವನ್ನು ರೂಪಿಸುತ್ತದೆ. ಕ್ರಮೇಣ, ಭ್ರೂಣವು ಕಲ್ಲಿನಂತೆ ಗಟ್ಟಿಯಾಗುತ್ತದೆ ಮತ್ತು ಯಾವುದೇ ಲಕ್ಷಣಗಳನ್ನು ಉಂಟುಮಾಡದೆ ವರ್ಷಗಳ ಕಾಲ ದೇಹದಲ್ಲಿ ಉಳಿಯಬಹುದು. ಈ ಅಜ್ಜಿಯಲ್ಲಿ ಗರ್ಭಧಾರಣೆಯು ಸುಮಾರು 40 ವರ್ಷಗಳ ಹಿಂದೆ ಸಂಭವಿಸಿದೆ,
