Bantwala: ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ನಾಲ್ಕು ದನಗಳು ಕಳ್ಳತನವಾದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಣೇಶ ರೈ ಹಾಗೂ ನಾರಾಯಣ ನಾಯ್ಕ ಎಂಬುವರಿಗೆ ಸೇರಿದ ಒಟ್ಟು ನಾಲ್ಕು ದನಗಳು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಕಾಣೆಯಾಗಿದ್ದವು. ಈ ಸಂಬಂಧ ಗಣೇಶ ರೈ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 169/2025 ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡಿದ್ದ ವಿಟ್ಲ ಪೊಲೀಸರು, ಝುಲ್ಫಾನ್ ಮಾಲಿಕ್ (30), ಕೋಡಿ, ಉಳ್ಳಾಲ ಗ್ರಾಮ ಮತ್ತು ತಾಲೂಕು, ಮಂಗಳೂರು ನಿವಾಸಿಯನ್ನು ದಸ್ತಗಿರಿ ಮಾಡಿದ್ದಾರೆ.ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
