Puttur: ಸ್ವಚ್ಛ ಏವಂ ಹರಿತ್ ವಿದ್ಯಾಲಯ 5 ಸ್ಟಾರ್ ಪಡೆದ ವೀರಮಂಗಲ ಪಿಎಂಶ್ರೀ ಶಾಲೆ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದ ಪರಿಶೀಲನೆಗೆ ಆಯ್ಕೆಗೊಂಡಿದೆ.
ದ.ಕ ಜಿಲ್ಲೆಯಿಂದ 3 ಶಾಲೆಗಳು ಮಾತ್ರ 5 ಸ್ಟಾರ್ ಪಡೆದು ರಾಜ್ಯಕ್ಕೆ ಆಯ್ಕೆಯಾಗಿತ್ತು. ರಾಜ್ಯಹಂತದಿಂದ ಶಾಲಾ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಭೇಟಿ ನೀಡಿ ಕೂಲಂಕುಷವಾಗಿ ವಿವಿಧ ಆಯಾಮಗಳಲ್ಲಿ ಶಾಲಾ ಪರಿಸರ,ಸ್ವಚ್ಛತೆ,ಇಕೋ ಕ್ಲಬ್ ಕಾರ್ಯಕ್ರಮಗಳು,ಸೋಲಾರ್, ಕುಡಿಯುವ ನೀರು,ಶೌಚಾಲಯ ನಿರ್ವಹಣೆ ಇತ್ಯಾದಿ ಪರಿಸರಕ್ಕೆ ಸಂಬಂಧಿಸಿದ ಸಂಗತಿಗಳನ್ನು ಪರಿಶೀಲಿಸಿದರು.
ಅಂತಿಮವಾಗಿ ರಾಜ್ಯದಿಂದ 20 ಶಾಲೆಗಳನ್ನು ಆಯ್ಕೆಗೊಳಿಸಲಾಗಿದ್ದು,ರಾಷ್ಟ್ರ ಮಟ್ಟದ ಭೌತಿಕ ಪರಿಶೀಲನೆಗೆ ಗ್ರಾಮೀಣ ಭಾಗದ ವೀರಮಂಗಲ ಪಿಎಂಶ್ರೀ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ 200 ಶಾಲೆಗಳನ್ನು ಆಯ್ಕೆ ಮಾಡಿ ಒಂದು ಲಕ್ಷ ಬಹುಮಾನ ದೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಫಲಕ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಅನುಭವಾತ್ಮಕ ಭೇಟಿ ಕಾರ್ಯಕ್ರಮ ನಡೆಯಲಿದೆ. ಎಂದು ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರು ಹಾಗೂ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರು ತಿಳಿಸಿದ್ದಾರೆ. ಈಗಾಗಲೆ ಅತ್ಯುತ್ತಮ ಪಿಎಂಶ್ರೀ ಶಾಲೆ ಎಂದು ರಾಷ್ಟ್ರ ಮಟ್ಟಕ್ಕೆ ಸಮರ್ಪಣೆಯಾಗಿರುವ ಈ ಶಾಲೆಗೆ ಸಮಗ್ರ ಶಿಕ್ಷಣ ಕರ್ನಾಟಕವು ಅತ್ಯುತ್ತಮ ಎಸ್ ಡಿ ಎಂ ಸಿ ಎಂದು ಒಂದು ಲಕ್ಷ ಬಹುಮಾನದೊಂದಿಗೆ ಪುಷ್ಠಿ ಗೌರವ ನೀಡಿದೆ.
