Toxic : ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಇಡೀ ಭಾರತೀಯ ಚಿತ್ರರಂಗವನ್ನೇ ಅಲುಗಾಡಿಸಿ ಬಿಟ್ಟಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಟೀಸರ್ ರಿಲೀಸ್ ಆದ 24 ಗಂಟೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೀಗ ಟಾಕ್ಸಿಕ್ ಸಿನಿಮಾಾಗೆ ಸಂಕಷ್ಟ ಎದುರಾಗಿದ್ದು ಟಾಕ್ಸಿಕ್ ಟೀಸರ್ ಬಗ್ಗೆ ದೂರು ದಾಖಲಾಗಿದೆ.
ಹೌದು, ಯಶ್, ಕೆಜಿಎಫ್ ಸಿನಿಮಾಕ್ಕಿಂತಲೂ ಹೆಚ್ಚು ರಗಡ್ ಆಗಿ ಟಾಕ್ಸಿಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್‌ಗಾಗಿ ವಿಲನ್ ಸರ್ಚ್ ಮಾಡುತ್ತಿರುತ್ತಾರೆ. ಮುಂದೆಯೇ ಕಾರ್ ಇದೆ. ಕಾರೊಳಗೆ ಕಂಡು ಬರುವ ಆ ಸೀನ್ ಮಾತ್ರ ಟೀಸರ್‌ಗೆ ಅವಶ್ಯಕತೆ ಇತ್ತಾ ಅನ್ನೋ ಪ್ರಶ್ನೆ ದೊಡ್ಡವರನ್ನು ಕಾಡುತ್ತಿದೆ. ಯಾಕೆಂದರೆ, 18 ವರ್ಷದೊಳಗಿನ ಯಶ್ ಫ್ಯಾನ್ಸ್ ಗೆ ಖಂಡಿತಾ ಈ ಟೀಸರ್ ತೋರಿಸೋಹಾಗಿಲ್ಲ. ಸ್ಮಶಾನದ ಮುಂದೆ ಕಾರಿನಲ್ಲಿ ಲೇಡಿ ಜೊತೆ ಯಶ್ ಇರುವ ರೀತಿ ನೋಡಿದ್ರೆ ಇದು ಓನ್ಲಿ ಫಾರ್ ಅಡಲ್ಟ್ಸ್‌ಗೆ ಅನ್ನೋ ಹಾಗಿದೆ.
ಇದೀಗ ಟಾಕ್ಸಿಕ್ ಟೀಸರ್ ರಿಲೀಸ್ ಆದ ಬೆನ್ನೆಲೆ ಟಾಕ್ಸಿಕ್ ಟೀಸರ್ ನಲ್ಲಿ ಅಶ್ಲೀಲತೆ ಇದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ವಕೀಲ ಲೋಹಿತ್ ಹನುಮಪುರ ಎಂಬವರು ದೂರು ಕೊಟ್ಟಿದ್ದಾರೆ. ಅವರು ಸಾರ್ವಜನಿಕ ನೈತಿಕತೆ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
