Home » Bigg Boss: 18 ಲಕ್ಷ ಹಣ ಆಯ್ಕೆ ಮಾಡಿ ಬಿಗ್ ಬಾಸ್ ಮನೆಯಿಂದ ಹೊರ ನಡೆದ ಗೆಲ್ಲುವ ಸ್ಪರ್ಧಿ

Bigg Boss: 18 ಲಕ್ಷ ಹಣ ಆಯ್ಕೆ ಮಾಡಿ ಬಿಗ್ ಬಾಸ್ ಮನೆಯಿಂದ ಹೊರ ನಡೆದ ಗೆಲ್ಲುವ ಸ್ಪರ್ಧಿ

0 comments

 

Bigg Boss: ಕಳೆದ ವಾರ ಸ್ಪರ್ಧಿಗಳಿಗೆ  ರೆಡ್ ಕಾರ್ಡ್ ಕೊಟ್ಟು ಮನೆಗೆ ಕಳಿಸುವ ಮುಖಾಂತರ ತಮಿಳು ಬಿಗ್ ಬಾಸ್ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಮತ್ತೊಂದು ವಿಚಾರಕ್ಕೆ ತಮಿಳು ಬಿಗ್ ಬಾಸ್ ಮನೆಯಲ್ಲಿನ ವಿಚಾರ ಒಂದು ಮುನ್ನಲೆಗೆ ಬಂದಿದೆ.

 

ಹೌದು, ತಮಿಳು ಬಿಗ್ ಬಾಸ್ ಮನೆಯಲ್ಲಿ ಊಹಿಸದ ಟ್ವಿಸ್ಟ್ ಒಂದು ನಡೆದಿದ್ದು, ಗೆಲ್ಲುವ ಸ್ಪರ್ಧಿ ಫಿನಾಲೆಗೆ ಕೆಲವೇ ದಿನಗಳ ಮೊದಲು 18 ಲಕ್ಷ ರೂಪಾಯಿ ನಗದು ಆಯ್ಕೆ ಮಾಡಿ ಮನೆಯಿಂದ ಹೊರ ನಡೆದಿದ್ದಾರೆ. ಇದು ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

 

ತಮಿಳು ಬಿಗ್ ಬಾಸ್ ಫಿನಾಲೆಗೆ ಕೇವಲ ಐದು ದಿನ ಮಾತ್ರ ಬಾಕಿ ಇದೆ. ಇದರ ನಡುವೆ ಬಿಗ್ ಬಾಸ್ ಆಫರ್ ಒಂದು ನೀಡಿತ್ತು. 18 ಲಕ್ಷ ರೂಪಾಯಿ ಪಡೆದು ಮನೆಯಿಂದ ಹೊರ ನಡೆಯಬಹುದು. ಅಥವಾ ಆಫರ್ ತಿರಸ್ಕರಿಸಿ ಮನೆಯಲ್ಲಿ ಮುಂದುವರಿಯಬಹುದು ಅನ್ನೋ ಆಫರ್ ನೀಡಲಾಗಿತ್ತು. ಇದರಲ್ಲಿ ಗೆಲ್ಲುವ ಸ್ಪರ್ಧಿ ಗಾನಾ ವಿನೋದ್ 18 ಲಕ್ಷ ರೂಪಾಯಿ ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳು ಬಿಗ್ ಬಾಸ್‌ನಲ್ಲಿ ಸ್ಪರ್ಧಿ ಗಾನಾ ವಿನೋದ್ ಈ ಬಾರಿ ತಮಿಳು ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದರು. ಆದರೆ ಈಗ ಅವರ ನಿರ್ಧಾರ ಅಚ್ಚರಿ ಮೂಡಿಸಿದೆ.

 

 ಗಾನ ವಿನೋದ್ ಅವರ ನಡೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಐದು ದಿನದಲ್ಲಿ ಬಿಗ್ ಬಾಸ್ ಟ್ರೋಫಿ ಜೊತೆ 50 ಲಕ್ಷ ರೂಪಾಯಿ ಗೆಲ್ಲಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಿದ್ದಾರೆ. ಹಣಕ್ಕಿಂತ ನಿಮ್ಮ ಪ್ರೀತಿ ದೊಡ್ಡದು ಎಂದು ಅಭಿಮಾನಿಗಳು, ಬೆಂಬಲಿಗರಿಗೆ ಸಂದೇಶ ಕಳುಹಿಸಿದ್ದಾರೆ.

You may also like