Gadaga: ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿದೆ.
ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿದೆ. ಗಂಗವ್ವ ರಿತ್ತಿ ಕುಟುಂಬ ತಮ್ಮ ಸ್ವ – ಇ ಚ್ಛೆ ಯಿಂದ ಸರ್ಕಾರಕ್ಕೆ ನಿಧಿಯನ್ನ ನೀಡಲು ನಿರ್ಧರಿಸಿದ್ದಾರೆ. ಮನೆಯ ಅಡಿಪಾಯ ಅಗೆಯುವ ವೇಳೆ ಸಿಕ್ಕ ಚಿನ್ನಾಭರಣ ಇರುವ ನಿಧಿಯನ್ನ ಗಂಗವ್ವ ಬಸವರಾಜ ರಿತ್ತಿ ಕುಟುಂಬಸ್ಥರು, ಲಕ್ಕುಂಡಿ ಗ್ರಾಮದಲ್ಲಿರುವ ಗಣೇಶ ದೇಗುಲದಲ್ಲಿ ಇಟ್ಟಿದ್ದರು. ದೇವಸ್ಥಾನಕ್ಕೆ ಬೀಗ ಹಾಕಿ ಭದ್ರತೆ ನೀಡಲಾಗಿತ್ತು.
ಇದೀಗ ನಿಧಿ ನೋಡಲು ನೂರಾರು ಜನ ಸೇರಿದ್ದಾರೆ. ಸ್ಥಳಕ್ಕೆ ಎಡಿಸಿ ದುರ್ಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ನೀಡಿದ್ದಾರೆ. ಲಕ್ಕುಂಡಿ ಪ್ರಾಧಿಕಾರದ ಸದಸ್ಯರು, ಪುರತತ್ವ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತದೆ. ಪತ್ತೆಯಾದ ಚಿನ್ನಾಭರಣ ಯಾರ ಕಾಲದ್ದು ಎಂಬ ತನಿಖೆ ಕೂಡ ನಡೆಯುತ್ತಿದೆ.
