Home » Congress -JDS: ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್ !! ಜೆಡಿಎಸ್ -ಕಾಂಗ್ರೆಸ್ ಟ್ವೀಟ್ ವಾರ್

Congress -JDS: ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್ !! ಜೆಡಿಎಸ್ -ಕಾಂಗ್ರೆಸ್ ಟ್ವೀಟ್ ವಾರ್

0 comments

 

Congress-JDS: ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಟ್ವಿಟ್ಟರ್ ವಾರ್ ಶುರುವಾಗಿದ್ದು ‘ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಜೆಡಿಎಸ್’ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

 

ಹೌದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಪರ ಪಕ್ಷಗಳು ದಾಳಿಗೆ ಪ್ರತಿದಾಳಿ ನಡೆಸುತ್ತಿವೆ. ಆರಂಭದಲ್ಲಿ ಆರೋಗ್ಯಕರ ಚರ್ಚೆಯಂತಿದ್ದ ಈ ಜಗಳ ಇದೀಗ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. 

 

ಮೊದಲಿಗೆ ಡಿ.ಕೆ.ಶಿವಕುಮಾರ್‌ ವಿರುದ್ಧ ಹೆಚ್‌.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿತ್ತು. ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಪಕ್ಷ ಕೂಡ ಕಣಕ್ಕಿಳಿದಿದೆ. ಸಿಡಿ ಫ್ಯಾಕ್ಟರಿ ಮಾಲೀಕನ‌ “ಮನೆಹಾಳು ಆತ್ಮರತಿ” ಬಗ್ಗೆ ಕಾಂಗ್ರೆಸ್‌ ಮರೆತಿದೆ! ಟೆಂಟ್‌ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು? “ಕಲೆಕ್ಷನ್ ಗಿರಾಕಿಯ ಆತ್ಮರತಿ” ಇರುವುದು ಮಸಾಜ್ ಪಾರ್ಲರ್‌ಗಳಲ್ಲಿ ಅಲ್ಲವೇ? “ಹನಿಟ್ರಾಪ್ ಅಧ್ಯಕ್ಷನ ಆತ್ಮರತಿ”ಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ? ಎಂದು ಜೆಡಿಎಸ್‌ ತಿರುಗುಬಾಣ ಬಿಟ್ಟಿದೆ.

 

ದೀನ ದಲಿತರು, ಬಡವರು, ಮಹಿಳೆಯರ ಜಮೀನು ಕಬಳಿಸುವ ರಿಯಲ್ ಎಸ್ಟೇಟ್ ಏಜೆಂಟ್’ನ ಆತ್ಮರತಿ ಬಗ್ಗೆ ಬೆಂಗಳೂರಿಗೇ ಚಿರಪರಿಚಿತ. “ಸ್ವಾರ್ಥ ಸಾಧನೆಗೆ ಬ್ಲ್ಯಾಕ್ ಮೇಲ್” ಮಾಡುವ ಆತ್ಮರತಿಯ ರಾಜಕಾರಣಿಯ ಅನಾಚಾರಗಳ ದೊಡ್ಡ ಪಟ್ಟಿಯೇ ಇದೆ. ರೌಡಿ ರಾಜಕಾರಣಿಯ ಅನುಭವದ ಕೊಚ್ಚೆಗೆ ಯಾರು ತಾನೆ ಸಮ. ನಿಮಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ರೋಲ್ ಕಾಲ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‌? ಎಂದು ಕೇಳಿದೆ.

 

ಇದಕ್ಕೆ ಕಾಂಗ್ರೆಸ್ ಮತ್ತೆ ತಿರುಗೇಟು ನೀಡಿದ್ದು, ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ಹೇಳಿದೆ.

 

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಅಟಕಟಾ.. ನಿಮ್ಮದು ಸೆಕ್ಯೂರ್ಡ್ “ಬ್ಲೂ ಬಾಯ್ಸ್” ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..! ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ.

ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಅವರು ಈಗಲೂ ಜೈಲಲ್ಲಿ “ನೀಲ ಮೇಘ ಶ್ಯಾಮ..” ಹಾಡುತ್ತಿದ್ದಾರೆ. ನಿಮ್ಮ ಇನ್ನೊಬ್ಬ ಲಿಂಬಿಯ ಬನದ ನಾಯಕರು “ಲಿಂಬೆ ಹಣ್ಣಿನಂತ…” ಹಾಡು ಹೇಳಲು ಹೋಗಿ ಜೈಲಲ್ಲಿ ಮುದ್ದೆ ಮುರಿದು ಬಂದಿದ್ದಾರೆ. ಇನ್ನೊಬ್ಬ “ರಾಧಾ ಮಾಧವ ಮನೋ ವಿಲಾಸ..” ನಾಯಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ.

 

ನಿಮ್ಮ ನಾಯಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟಲ್ಲಿ ತೋರಿಸುವ ಅವಕಾಶವೆಲ್ಲಿದೇ? ನಿಜಕ್ಕೂ ನಿಮ್ಮ ಸಿನಿಮಾ ಚನ್ನಾಗಿದೆ. ಅದರ ಮೇಲೆ ಮತ್ತೊಂದು ಕತೆ ಕಟ್ಟಲು ಹೋಗಬೇಡಿ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿ ಎಂದು ತಿರುಗೇಟು ನೀಡಿದೆ.

You may also like