Home » Kerala: ಮದುವೆ ಹೆಸರಲ್ಲಿ ರೇಪ್, ಗರ್ಭಪಾತಕ್ಕೆ ಒತ್ತಾಯ: ಕೇರಳದ ಕಾಂಗ್ರೆಸ್ ಉಚ್ಚಾಟಿತ ಶಾಸಕ ಅರೆಸ್ಟ್

Kerala: ಮದುವೆ ಹೆಸರಲ್ಲಿ ರೇಪ್, ಗರ್ಭಪಾತಕ್ಕೆ ಒತ್ತಾಯ: ಕೇರಳದ ಕಾಂಗ್ರೆಸ್ ಉಚ್ಚಾಟಿತ ಶಾಸಕ ಅರೆಸ್ಟ್

0 comments

Kerala: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಗರ್ಭಪಾತಕ್ಕೆ ಒತ್ತಾಯಿಸಿರುವ ಆರೋಪದ ಮೇಲೆ ಕೇರಳದ (Kerala) ಕಾಂಗ್ರೆಸ್ (Congress) ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್ (Rahul Mamkootathil) ಅವರನ್ನು ಬಂಧಿಸಲಾಗಿದೆ.

ಪತ್ತನಂತಿಟ್ಟ (Pathanamthitta) ಜಿಲ್ಲೆಯ ಮಹಿಳೆಯೊಬ್ಬರು ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರು ದಾಖಲಿಸಿದ್ದು, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಕೊಳ್ಳಲು ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಶಾಸಕ ರಾಹುಲ್ ವಿರುದ್ಧ ದಾಖಲಾಗುತ್ತಿರುವ ಮೂರನೇ ಅತ್ಯಾಚಾರ ಪ್ರಕರಣ ಇದಾಗಿದೆ. 

ಮಹಿಳೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದು, ಪೊಲೀಸರು ಸ್ವೀಕರಿಸಿದ್ದಾರೆ. ಬಳಿಕ ಶುಕ್ರವಾರ (ಜ.9) ಪಾಲಕ್ಕಾಡ್‌ನ ಹೋಟೆಲ್‌ನಲ್ಲಿ ತಂಗಿದ್ದ ಶಾಸಕ ರಾಹುಲ್ ಅವರನ್ನು ವಶಕ್ಕೆ ಪಡೆದು, ಬಂಧಿಸಿದ್ದಾರೆ. ಈ ಸಂಬಂಧ ಪತ್ತನಂತಿಟ್ಟ ಜಿಲ್ಲೆಯಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

You may also like