Jio: ಹೊಸ ವರ್ಷದ ಹೊಸ್ತಿಲಿನಲ್ಲಿ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಿಯೋ ಸಂಸ್ಥೆಯು ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, 450ರೂಗೆ ಸೂಪರ್ ಆಫರ್ ಘೋಷಿಸಿದೆ.
ಹೌದು, ಜಿಯೋ ಹೊಸ ರೂ.450 ಹಬ್ಬದ ಕೊಡುಗೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಹಲವು ಕೊಡುಗೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಈ ಪ್ಲಾನ್ ನಿಂದ ಏನೆಲ್ಲಾ ಲಾಭ ದೊರೆಯುತ್ತದೆ ನೋಡೋಣ ಬನ್ನಿ.
ಜಿಯೋ ರೂ.450 ಯೋಜನೆಯು 36 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ದಿನಕ್ಕೆ 2 GB ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತದೆ, ಇದು ಒಟ್ಟು 72 GB ಯನ್ನು ಒಳಗೊಂಡಿದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ, ಇಂಟರ್ನೆಟ್ ವೇಗವನ್ನು 64 Kbps ಗೆ ಇಳಿಸಲಾಗುತ್ತದೆ. ಇದರ ಜೊತೆಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ (Unlimited voice call )ಮತ್ತು ದಿನಕ್ಕೆ 100 SMS ಅನ್ನು ಸಹ ಒಳಗೊಂಡಿದೆ. ಅರ್ಹ ಚಂದಾದಾರರು ಜಿಯೋನ ಟ್ರೂ 5G ಕೊಡುಗೆಯ ಅಡಿಯಲ್ಲಿ ಅನಿಯಮಿತ 5G ಡೇಟಾವನ್ನು ಪ್ರವೇಶಿಸಬಹುದು, ಇದು ಸಾಧನ ಹೊಂದಾಣಿಕೆ ಮತ್ತು ನೆಟ್‌ವರ್ಕ್ ಲಭ್ಯತೆಗೆ ಒಳಪಟ್ಟಿರುತ್ತದೆ.
ಇಷ್ಟೇ ಅಲ್ಲದೇ 450 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಂಡರೆ, ಹಬ್ಬದ ಭಾಗವಾಗಿ, ಜಿಯೋ ಯೋಜನೆಯೊಂದಿಗೆ ಬಂಡಲ್ ಮಾಡಿದ ಉಚಿತ ಚಂದಾದಾರಿಕೆಗಳನ್ನು ನೀಡುತ್ತಿದೆ. ಇವುಗಳಲ್ಲಿ 50 GB ಉಚಿತ ಸಂಗ್ರಹಣೆಯೊಂದಿಗೆ JioAICloud ಗೆ ಪ್ರವೇಶ ಮತ್ತು ಮೂರು ತಿಂಗಳ JioHotstar ಮೊಬೈಲ್/ಟಿವಿ ಚಂದಾದಾರಿಕೆ ಸೇರಿವೆ. ಹಲವಾರು ಜಿಯೋ ಪ್ರಿಪೇಯ್ಡ್ ಪ್ಯಾಕ್‌ಗಳೊಂದಿಗೆ ಜಿಯೋಟಿವಿಯನ್ನೂ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.
