Home » Toxic ಟೀಸರ್ ನಲ್ಲಿ ಕಾರು ಮರಕ್ಕೆ ಗುದ್ದಿದ್ಯಾಕೆ? ಟೀಸರ್ ಗೆ ಟ್ವಿಸ್ಟ್ ಕೊಟ್ಟ ನೆಟ್ಟಿಗರು

Toxic ಟೀಸರ್ ನಲ್ಲಿ ಕಾರು ಮರಕ್ಕೆ ಗುದ್ದಿದ್ಯಾಕೆ? ಟೀಸರ್ ಗೆ ಟ್ವಿಸ್ಟ್ ಕೊಟ್ಟ ನೆಟ್ಟಿಗರು

0 comments

Toxic : ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಇಡೀ ಭಾರತೀಯ ಚಿತ್ರರಂಗವನ್ನೇ ಅಲುಗಾಡಿಸಿ ಬಿಟ್ಟಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್‌ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಟೀಸರ್ ರಿಲೀಸ್ ಆದ 24 ಗಂಟೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈಗ ಟಾಕ್ಸಿಕ್ ಟೀಸರ್ ನಲ್ಲಿ ಕಾಣಿಸಿಕೊಳ್ಳುವ ಕಾರು, ಮರಕ್ಕೆ ಗುದ್ದಿದ್ದು ಯಾಕೆ ಎಂಬ ವಿಚಾರ ಚರ್ಚೆಯಾಗುತ್ತಿದೆ.

 

ಟಾಕ್ಸಿಕ್ ಸಿನಿಮಾದ ಟೀಸರ್ ಸಖತ್ ಇಂಟ್ರೆಸ್ಟಿಂಗ್ ಆಗಿ, ಡಿಫರೆಂಟ್ ಆಗಿ ಮೂಡಿ ಬಂದಿದೆ. ಹೀಗಿರುವಾಗಲೇ ಇಂಟರ್​ನೆಟ್​ನಲ್ಲಿ ಜನರು ಟೀಸರ್​ ಅನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಟೀಸರ್ ಅನ್ನು ವಿಶ್ಲೇಷಿಸುತ್ತಿರುವ ಜನರು ಟಾಕ್ಸಿಕ್ ಟೀಸರ್​​ನಲ್ಲಿ ಕಪ್ಪು ಬಣ್ಣದ ಕಾರು ಮರಕ್ಕೆ ಗುದ್ದಿದ್ದು ಯಾಕೆ? ಕಾರಣ ಏನು ಅಂತ ಮಾಡನಾಡಿಕೊಳ್ತಿದ್ದಾರೆ.

 

ಅದು ಟಾಕ್ಸಿಕ್ ಟೀಸರ್​​ನಲ್ಲಿ ಕಾಣಿಸಿಕೊಂಡಿರುವ ಕಪ್ಪು ಬಣ್ಣದ ಕಾರು ಮರಕ್ಕೆ ಗುದ್ದಿದ್ದು ಯಾಕೆ? ಎಂಬುದರ ಕುರಿತು ಸ್ವಾರಸ್ಯಕರ ಟ್ರೊಲ್ ಗಳು ಹರಿದಾಡುತ್ತಿವೆ. ಈ ಪೈಕಿ ಒಂದು ಟ್ರೊಲ್ ನಲ್ಲಿ, ಅಂಕಲ್ ಹಿಂದೆ ಅಲ್ಲ ಮುಂದೆ ದಾರಿ ನೋಡು..ಹಿಂದೆ ನೋಡಿಕೊಂಡು ಗಾಡಿ ಓಡಿಸಿದರೆ ಹಿಂಗೇ ಆಗುತ್ತೆ. ಅದಕ್ಕೆ ಮುಂದೆ ನೋಡಿಕೊಂಡು ಗಾಡಿ ಓಡಿಸು. ಆಗ ಆಯಕ್ಸಿಡೆಂಟ್ ಆಗಲ್ಲ ಎಂದು ನೆಟ್ಟಿಗರು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

You may also like