Home » ಬೆಳ್ತಂಗಡಿ: ಚಿರತೆಯ ಮೃತದೇಹ ಪತ್ತೆ ಪ್ರಕರಣ: ಶವಪರೀಕ್ಷೆ ಮಾಡಿ ಅಂತ್ಯಕ್ರಿಯೆ ನಡೆಸಿದ ಅರಣ್ಯ ಇಲಾಖೆ

ಬೆಳ್ತಂಗಡಿ: ಚಿರತೆಯ ಮೃತದೇಹ ಪತ್ತೆ ಪ್ರಕರಣ: ಶವಪರೀಕ್ಷೆ ಮಾಡಿ ಅಂತ್ಯಕ್ರಿಯೆ ನಡೆಸಿದ ಅರಣ್ಯ ಇಲಾಖೆ

0 comments

ಬೆಳ್ತಂಗಡಿ: ವೇಣೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಇರ್ವತ್ತೂರು ಗ್ರಾಮದ ಪರಾರಿಯ ಎಂಬಲ್ಲಿ ಸರಕಾರಿ ಜಾಗದಲ್ಲಿ 3 ರಿಂದ 4 ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜ.10 ರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿದ ನಂತರ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವೇಣೂರು ಅರಣ್ಯ ಇಲಾಖೆಯ ನಾಯಿನಾಡ್‌ ನಲ್ಲಿರುವ ಗಸ್ತುವಲಯ ವಸತಿಗೃಹದ ಬಳಿ ಬಂಟ್ವಾಳ ಪಶುವೈದ್ಯರಾದ ಅಶೋಕ್‌ ಶೆಟ್ಟಿ ಅವರ ನೇತೃತ್ವದಲ್ಲಿ ಜ.11 ರಂದು ಶವಪರೀಕ್ಷೆ ಮಾಡಲಾಗಿದೆ. ಈ ಸಂದರ್ಭ ಚಿರತೆಯ ಕುತ್ತಿಗೆ ಭಾಗಕ್ಕೆ ಗಾಯವಾಗಿರುವುದು, ಹೊಟ್ಟೆಯಲ್ಲಿ ನಾಯಿ ಮಾಂಸ ಇರುವುದು ಕಂಡು ಬಂದಿದೆ. ಕಾಡು ಹಂದಿಗೆ ಇಟ್ಟ ಉರುಳಿಗೆ ಅಥವಾ ತಂತಿ ಬೇಲಿಗೆ ಸಿಲುಕಿ ಗಾಯಗೊಂಡು ಮೃತಪಟ್ಟಿರಬಹುದು ಎನ್ನುವ ಶಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಪಶುವೈದ್ಯರು ಶಂಕೆ ವ್ಯಕ್ತಿಪಡಿಸಿದ್ದಾರೆ.

ನಂತರ ಕಾನೂನು ಪ್ರಕರಣ ಚಿರತೆ ದಹನ ಮಾಡಲಾಯಿತು. ಶವ ಪರೀಕ್ಷೆ ಮಾಡಿದ ಬಳಿಕ ಚಿರತೆಯ ವಿವಿಧ ಭಾಗಗಳನ್ನು ಹೈದರಾಬಾದ್‌ ಅಥವಾ ಬೆಂಗಳೂರು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು ಎಂದು ವರದಿಯಾಗಿದೆ.

You may also like