Home » Mark: ‘ಮಾರ್ಕ್’ ಸಿನಿಮಾ 3 ವಾರದಲ್ಲಿ ಕಳಿಸಿದ್ದೆಷ್ಟು?

Mark: ‘ಮಾರ್ಕ್’ ಸಿನಿಮಾ 3 ವಾರದಲ್ಲಿ ಕಳಿಸಿದ್ದೆಷ್ಟು?

0 comments

Mark: ಕನ್ನಡ ಚಿತ್ರರಂಗಕ್ಕೆ ಇದೀಗ ಸುಗ್ಗಿಯ ಕಾಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ ರಿಲೀಸ್ ಆದ ಒಂದು ವಾರದ ಬಳಿಕ ಕಿಚ್ಚ ಸುದೀಪ್ ಅವರ ‘ಮಾರ್ಕ್’ ಮತ್ತು ರಾಜ್ ಬಿ ಶೆಟ್ಟಿ ಅವರ ’45’ ಚಿತ್ರಗಳು ರಿಲೀಸ್ ಆಗಿದ್ದವು. ಇದೀಗ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರಿಲೀಸ್ ಆಗಿ ಮೂರು ವಾರಗಳು ಕಳೆದಿವೆ. ಈ ಮೂರು ವಾರದಲ್ಲಿ ಮಾರ್ಕ್ ಸಿನಿಮಾ ಗಳಿಸಿದ್ದು ಎಷ್ಟು ಎಂಬ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ವಿಚಾರ.

ಮೂರನೇ ವಾರದ ಬಳಿಕವೂ ಹಲವು ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಶೋಗಳು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿವೆ. ಮೊದಲ ಎರಡು ವಾರ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾವೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ವೇಳೆಗೆ ‘ಮಾರ್ಕ್’ ಸಿನಿಮಾದ ಒಟ್ಟು ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ. ಇಲ್ಲಿಯವರೆಗೆ ‘ಮಾರ್ಕ್’ ಸಿನಿಮಾ ಬರೋಬ್ಬರಿ 51 ಕೋಟಿ 30 ಲಕ್ಷವನ್ನು ಬಾಚಿಕೊಂಡಿದೆ. ಸುದೀಪ್ ಅವರ ಅಭಿಮಾನಿಗಳ ಜೊತೆಗೆ ಕುಟುಂಬ ಪ್ರೇಕ್ಷಕರು ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

ಟೈಟ್ ಆದ ಚಿತ್ರಕತೆ ಹೊಂದಿರುವ ‘ಮಾರ್ಕ್’ ಸಿನಿಮಾವನ್ನು ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ‘ಮ್ಯಾಕ್ಸ್’ ಸಿನಿಮಾಕ್ಕೂ ಇವರದ್ದೆ ನಿರ್ದೇಶನ. ಈ ಸಿನಿಮಾದಲ್ಲಿ ಸುದೀಪ್ ಜೊತೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ನಾಯಕಿಯರಾಗಿ ನಿಶ್ವಿಕಾ ನಾಯ್ಡು, ರೋಶಿಕಾ ಅವರುಗಳು ಇದ್ದಾರೆ. ಸಿನಿಮಾಕ್ಕೆ ಸತ್ಯಜ್ಯೋತಿ ಕ್ರಿಯೇಷನ್ಸ್ ಮತ್ತು ಸ್ವತಃ ಸುದೀಪ್ ಅವರ ನಿರ್ಮಾಣ ಸಂಸ್ಥೆಯಾದ ಕಿಚ್ಚ ಕ್ರಿಯೇಷನ್ಸ್ ಬಂಡವಾಳ ಹೂಡಿದೆ. 

You may also like