Home » Magha Mela: ಮೊನಾಲಿಸ ರೀತಿ ಮಾಘ ಮೇಳದಲ್ಲಿ ಮತ್ತೊಬ್ಬ ಸುಂದರಿ ವೈರಲ್!!

Magha Mela: ಮೊನಾಲಿಸ ರೀತಿ ಮಾಘ ಮೇಳದಲ್ಲಿ ಮತ್ತೊಬ್ಬ ಸುಂದರಿ ವೈರಲ್!!

0 comments

Magha Mela: ಕಳೆದ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್‌ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರಾಗಿತ್ತು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾದಿದ್ದಳು. ಇದೀಗ ಈ ಮೊನಾಲಿಸಾ ಸಿನಿಮಾ ಹೀರೋಯಿನ್ ಆಗಿ ಮಿಂಚುತ್ತಿದ್ದಾಳೆ. ಇದರ ಬೆನ್ನಲ್ಲೇ ಇದೀಗ ಪ್ರಯಾಗ್ ರಾಜ್ ನಲ್ಲಿ ಮತ್ತೆ ಮಾಘ ಮೇಳ ನಡೆಯುತ್ತಿದ್ದು ಈ ಮೇಳದಲ್ಲಿ ಮತ್ತೊಬ್ಬಳು ಬ್ಯೂಟಿ ವೈರಲ್ ಆಗಿದ್ದಾಳೆ.

ಹೌದು, ಮಾಘ ಮೇಳದಲ್ಲಿ ಮೊನಾಲಿಸಾ ರೀತಿಯಲ್ಲಿ ಮತ್ತೊಬ್ಬಳು ರುದ್ರಾಕ್ಷಿ ಮಾರುವ ಸುಂದರಿ ಎಲ್ಲೆಡೆ ಫೇಮಸ್ ಆಗುತ್ತಿದ್ದಾಳೆ. ಸೋಶಿಯಲ್ ಮೀಡಿಯಾಗಳಲ್ಲಿ ಈಕೆಯದ್ದೆ ಹವಾ ಸೃಷ್ಟಿಯಾಗುತ್ತಿದೆ. ಅಂದ ಹಾಗೆ ಈಕೆಯ ಹೆಸರು ಮಹಿ ಎನ್ನಲಾಗಿದೆ. ಈಕೆಯು ಕೂಡ ರುದ್ರಾಕ್ಷಿ ಮಾರುತಿದ್ದು, ಆಕೆಯ ಸುಂದರ ಕಣ್ಣಿಗೆ, ಚಂದದ ಮುಗುಳ್ನಗೆ ಗೆ ಜನರು ಮಾರುಹೋಗಿದ್ದಾರೆ. ಮಾಘ ಮೇಳದಲ್ಲಿ  ಇವಳು ಇರುವ ಕಡೆಗಳಿಗೆಲ್ಲ ಮಾಧ್ಯಮದವರು ಹೋಗಿ ಮಾತನಾಡಿಸುತ್ತಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗುವಂತೆ ಮಾಡಿದೆ.

ಮೊನಾಲಿಸಾ ರೀತಿಯಲ್ಲಿಯೇ ಈಕೆಗೂ ಕೂಡ ಯೂಟ್ಯೂಬಸ್ ಹಾಗೂ ಮಾಧ್ಯಮಗಳಿಂದ ತುಂಬಾ ಕಿರಿಕಿರಿಯಾಗುತ್ತಿದ್ದು ಮುಖ ಮುಚ್ಚಿಕೊಂಡು ತಿರುಗುವಂತಹ ಪರಿಸ್ಥಿತಿ ಎದುರಾಗಿದೆ. ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿಯೂ ಇಂತಹ ದೃಶ್ಯಗಳನ್ನು ಕೂಡ ನಾವು ಕಾಣಬಹುದು. ಇವಳ ವೈರಲ್ ಆದ ವಿಡಿಯೋಗಳನ್ನು ಕಂಡು ಮೂನಾಲಿಸ ರೀತಿ ಇವಳನ್ನು ಕೂಡ ಫೇಮಸ್ ಮಾಡಿಬಿಡಿ ಎಂದು ಜನರು ಬಗೆ ಬಗೆಯಾಗಿ ಕಮೆಂಟ್ ಹಾಕುತ್ತಿದ್ದಾರೆ.

https://www.instagram.com/reel/DTC8ZqAk-WR/?igsh=MXZ2aTh1ZmYxanlmZQ==

You may also like