Home » ಟಾಕ್ಸಿಕ್‌ ಚಿತ್ರದ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು

ಟಾಕ್ಸಿಕ್‌ ಚಿತ್ರದ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು

0 comments

ಬೆಂಗಳೂರು: ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಹಾಗೂ ಯಶ್‌ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ ಚಿತ್ರ ಇದೀಗ ಕಾನೂನು ಮೆಟ್ಟಿಲೇರುವ ಲಕ್ಷಣ ಕಾಣಿಸುತ್ತಿದೆ. ಮಹಿಳೆಯರ ಘನತೆಗೆ ಕುಂದು ತರುವ ರೀತಿಯಲ್ಲಿ ಟೀಸರ್‌ನಲ್ಲಿ ದೃಶ್ಯಗಳು ಕಂಡು ಬಂದಿದ್ದು, ಈ ಕುರಿತು ದೂರು ದಾಖಲಾಗಿದ್ದು, ಮಹಿಳಾ ಆಯೋಗವು ಸೆನ್ಸಾರ್‌ ಮಂಡಳಿಗೆ ಪತ್ರ ಬರೆದಿದೆ.

ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಅಧಿಕೃತ ಪತ್ರವನ್ನು ಮಹಿಳಾ ಆಯೋಗವು ಬರೆದಿದ್ದು, ಟೀಸರ್‌ನಲ್ಲಿರುವ ದೃಶ್ಯಗಳ ಕುರಿತು ನಿಯಮಾನುಸಾರ ಪರಿಶೀಲನೆ ಮಾಡಿ ಕೈಗೊಂಡ ಕ್ರಮದ ಕುರಿತು ವರದಿ ನೀಡುವಂತೆ ಆಯೋಗವು ಸೂಚಿಸಿದೆ.

ಆಮ್‌ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್‌ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಟಾಕ್ಸಿಕ್‌ ಚಿತ್ರದ ಟೀಸರ್‌ನಲ್ಲಿ ಅಶ್ಲೀಲ ದೃಶ್ಯವಿದ್ದು, ಮಕ್ಕಳ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ಮುನ್ನೆಚ್ಚರಿಕೆ ಅಥವಾ ವಯಸ್ಸಿನ ಮಿತಿ ಇಲ್ಲದೆ ಇಂತಹ ದೃಶ್ಯಗಳನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಟೀಸರ್‌ ರದ್ದುಗೊಳಿಸುವುದು ಮಾತ್ರವಲ್ಲದೆ, ಯೂಟ್ಯೂಬ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳಿಂದ ಟೀಸರನ್ನು ಕೂಡಲೇ ತೆಗೆದುಹಾಕಲು ಉಷಾ ಮೋಹನ್‌ ಮನವಿ ಮಾಡಿದ್ದಾರೆ.

You may also like