Home » ಮಂಗಳೂರಿನ ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಕೆ: ಉಗಾಂಡ ಮಹಿಳೆ ಅರೆಸ್ಟ್‌

ಮಂಗಳೂರಿನ ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಕೆ: ಉಗಾಂಡ ಮಹಿಳೆ ಅರೆಸ್ಟ್‌

0 comments

ಮಂಗಳೂರು: ಡ್ರಗ್ಸ್‌ ಪೆಡ್ಲರ್‌ಗಳಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಉಗಾಂಡ ದೇಶದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿರುವ ಘಟನೆ ನಡೆದಿದೆ.

ಝಾಲಿಯಾ ಝಲ್ವಾಂಗೋ ಬಂಧಿತ ಮಹಿಳೆ. ಪೊಲೀಸರು ಬೆಂಗಳೂರಿನ ಜಿಗಣಿ ಸರಹದ್ದಿನಲ್ಲಿ ದಾಳಿ ಮಾಡಿದ್ದು, ಈ ಸಂದರ್ಭ ಮಹಿಳೆಯ ಬಳಿ 4 ಕೋಟಿ ರೂ. ಮೌಲ್ಯದ 4 ಕೆಜಿ ಎಂಡಿಎಂಎ ಡ್ರಗ್ಸ್‌ ಪತ್ತೆಯಾಗಿದೆ. ಮಂಗಳೂರಿನ 6 ಮಂದಿ ಪೆಡ್ಲರ್‌ಗಳನ್ನು ಈ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

You may also like