33
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಜೈಲಿನಲ್ಲಿರುವ ಮಗನ ಭೇಟಿಗೆಂದು ಬಂದ ತಾಯಿ ತಮ್ಮ ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದಿದ್ದಾರೆ. ಇದೀಗ ತಾಯಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಲಕ್ಷ್ಮೀ ನರಸಮ್ಮ (38) ಅವರು ವಿಸಿಟರ್ ಪಾಸ್ ಪಡೆದು ಭರತ್ ಎಂಬ ಕಾರಾಗೃಹ ಬಂದಿಯ ಸಂದರ್ಶನಕ್ಕೆ ಬಂದ ಸಂದರ್ಭದಲ್ಲಿ ತಪಾಸಣಾ ಸಮಯದಲ್ಲಿ ಖಾಸಗಿ ಭಾಗದೊಳಗೆ ಒಂದು ಸಂಖ್ಯೆಯ ಬೇಸಿಕ್ ಕಂಪನಿಯ ನೀಲಿ ಬಣ್ಣದ ಮೊಬೈಲ್ ಸಿಮ್ ಸಹಿತ ಪತ್ತೆಯಾಗಿದೆ.
ಮಹಿಳೆ ಕಾರಾಗೃಹದ ನಿಯಮ ಉಲ್ಲಂಘನೆ ಮಾಡಿದ್ದರಿಂದ ಲಕ್ಷ್ಮೀ ನರಸಮ್ಮ ಮತ್ತು ವಿಚಾರಣಾ ಬಂಧಿ ಭರತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.
