Home » Indian Railway : ರೈಲ್ವೇ ಟಿಕೆಟ್ ಬುಕ್ ಮಾಡಲು ಇನ್ನು ಮಧ್ಯ ರಾತ್ರಿವರೆಗೂ ಅವಕಾಶ !!

Indian Railway : ರೈಲ್ವೇ ಟಿಕೆಟ್ ಬುಕ್ ಮಾಡಲು ಇನ್ನು ಮಧ್ಯ ರಾತ್ರಿವರೆಗೂ ಅವಕಾಶ !!

0 comments

Indian Railway : ಭಾರತೀಯ ರೈಲ್ವೆ ಇಲಾಖೆಯು ಜನವರಿ 12ರಿಂದ ಹೊಸ ರೈಲು ಟಿಕೆಟ್ ಬುಕಿಂಗ್ ನಿಯಮಗಳನ್ನು ಕಾರ್ಯರೂಪಕ್ಕೆ ತಂದಿದೆ. ಇದರ ಅನ್ವಯ ಆಧಾರ್-ಪರಿಶೀಲಿಸಿದ IRCTC ಬಳಕೆದಾರರಿಗೆ ಮುಂಗಡ ಕಾಯ್ದಿರಿಸುವಿಕೆ (Advance Reservation Period – ARP) ಮೊದಲ ದಿನದ ಬುಕಿಂಗ್ (Booking) ವಿಂಡೋವನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಹೌದು, ರೈಲು ಟಿಕೆಟ್ ಬುಕ್ ಮಾಡುವಾಗ ‘ವೇಟಿಂಗ್ ಲಿಸ್ಟ್’ ಮತ್ತು ‘ತತ್ಕಾಲ್’ ನಿಂದಾಗಿ ಹಲವರು ಪ್ರತಿದಿನ ಕಷ್ಟಪಡುತ್ತಾರೆ. ಖಚಿತವಾದ ಸೀಟು ಸಿಗುವುದೋ ಇಲ್ಲವೋ ಎಂಬ ಆತಂಕ ಹೆಚ್ಚಾಗಿರುತ್ತದೆ. ಇದಕ್ಕೆ ಪರಿಹಾರವಾಗಿ, ಜನವರಿ 12, 2026 ರಿಂದ ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ ತಂದಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.

ಈ ಹಿಂದೆ ಇದ್ದ ನಿಯಮಗಳ ಪ್ರಕಾರ, ಆಧಾರ್ ದೃಢೀಕೃತ ಬಳಕೆದಾರರು ರಿಸರ್ವ್ಡ್ ಟಿಕೆಟ್ ಬುಕಿಂಗ್ ಆರಂಭಗೊಂಡ ಮೊದಲ ದಿನ ಬೆಳಗ್ಗೆ 8ರಿಂದ ಸಂಜೆ 4ರವವರೆಗೆ ಮಾತ್ರ ಟ್ರೈನ್ ಟಿಕೆಟ್ ಬುಕ್ ಮಾಡಲು ಅವಕಾಶ ಹೊಂದಿರುತ್ತಾರೆ. ಇವತ್ತಿನಿಂದ (ಜನವರಿ 12) ಎಆರ್​ಪಿಯ ಮೊದಲ ದಿನವನ್ನು ಸಂಪೂರ್ಣ ಆಧಾರ್ ದೃಢೀಕೃತ ಬಳಕೆದಾರರಿಗೆ ಮೀಸಲಿರಿಸಲಾಗಿದೆ. ಅಂದರೆ, ಇವರು ಮಾತ್ರವೇ ಅಂದು ಟ್ರೈನ್ ಟಿಕೆಟ್ ಬುಕಿಂಗ್ ಮಾಡಬಹುದು.

ಗಮನಿಸಬೇಕಾದ ಪ್ರಮುಖ ಅಂಶಗಳು:

ಈ ಹೊಸ ನಿಯಮ IRCTC ವೆಬ್‌ಸೈಟ್ ಮತ್ತು ಆಯಪ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ.

ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯುವವರಿಗೆ ಹಳೆಯ ನಿಯಮಗಳೇ ಮುಂದುವರಿಯಲಿವೆ.

You may also like