Bigg Boss-12 : ಬಿಗ್ ಬಾಸ್ ಸೀಸನ್ ಕನ್ನಡ 12 ಮುಕ್ತಾಯದ ಹಂತದಲ್ಲಿದ್ದು, ಈ ವಾರದ ಅಂತ್ಯದಲ್ಲಿ ಭರ್ಜರಿ ಫಿನಾಲೆ ಕೂಡ ನಡೆಯಲಿದೆ. ಹೀಗಾಗಿ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಿಗೆ ಅವರವರ ಮನೆಯವರ ಕಡೆಯವರು, ಅಭಿಮಾನಿಗಳು ಜನರ ಬಳಿ ವೋಟ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದೀಗ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶಾಸಕರು ಒಬ್ಬರು ಬಿಗ್ ಬಾಸ್ ಸ್ಪರ್ಧೆಗೆ ವೋಟ್ ಮಾಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.
ಹೌದು, ಬಿಗ್ ಬಾಸ್ ಮುಕ್ತಾಯವಾಗಲು ಇನ್ನೂ ಒಂದು ವಾರ ಮಾತ್ರ ಬಾಕಿ ಇದ್ದು ಹೊರಗಡೆ, ಮನೆಯೊಳಗಡೆ ಇರುವ ಸ್ಪರ್ಧಿಗಳ ಅಭಿಮಾನಿಗಳು ಹೊರಗಡೆ ಭರ್ಜರಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಪೋಸ್ಟರ್ ಬ್ಯಾನರ್ ಹಿಡಿದು ವಿಡಿಯೋ ಮುಖಾಂತರ ಎಲ್ಲೆಲ್ಲಾ ಸಾಧ್ಯವಾಗುತ್ತದೆ ಅಲ್ಲೆಲ್ಲ ವೋಟ್ ಮಾಡಿ, ವೋಟ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂಬಂತೆ ಇದೀಗ ಗಿಲ್ಲಿ ಪರವಾಗಿ ಅವರ ಕ್ಷೇತ್ರದ ಶಾಸಕರೇ ಮತ ಕೇಳಿದ್ದಾರೆ. ಗಿಲ್ಲಿಗೆ ಓಟು ಹಾಕಿರೆಂದು ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರು ಮತ ಯಾಚನೆ ಮಾಡಿದ್ದಾರೆ.
ವಿಡಿಯೋ ಮೂಲಕ ಅವರು ಗಿಲ್ಲಿಗೆ ಮತ ಹಾಕಿ ಎಂದು ಕೇಳಿಕೊಂಡಿದ್ದು, ಈಗಾಗಲೇ ಬಿಗ್ ಬಾಸ್ ಅಂತಿಮ ಘಟ್ಟಕ್ಕೆ ತಲುಪಿದ್ದು ಮಳವಳ್ಳಿಯ ಹೆಮ್ಮೆಯ ಗಿಲ್ಲಿ ನಟ ಅವರು ಸಹ ಬಿಗ್ ಬಾಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಅವರು ಫಿನಾಲೆ ತಲುಪಿದ್ದು, ನಾಡಿನ ಎಲ್ಲಾ ಜನತೆ ಗೆಲ್ಲಿಗೆ ಮತ ಹಾಕಿ ನಮ್ಮ ಭಾಗದ ಕಲಾವಿದನನ್ನು ಗೆಲ್ಲಿಸಬೇಕು. ನಮ್ಮ ಹಳ್ಳಿ ಪ್ರತಿಭೆಯನ್ನು ಇಡೀ ನಾಡಿಗೆ ಪರಿಚಯಿಸಬೇಕು ಹಾಗಾಗಿ ಪ್ರತಿಯೊಬ್ಬರೂ ಗಿಲ್ಲಿಗೆ ವೋಟ್ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
