Home » Belthangady: ಬೆಳ್ತಂಗಡಿ: ದೇವಸ್ಥಾನದ ಧನುಪೂಜೆಗೆ ಹೋದ ಯುವಕ ನಾಪತ್ತೆ: ರಕ್ತದ ಕಲೆಗಳು ಪತ್ತೆ

Belthangady: ಬೆಳ್ತಂಗಡಿ: ದೇವಸ್ಥಾನದ ಧನುಪೂಜೆಗೆ ಹೋದ ಯುವಕ ನಾಪತ್ತೆ: ರಕ್ತದ ಕಲೆಗಳು ಪತ್ತೆ

0 comments

Belthangady: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ಧನುಪೂಜೆಗೆಂದು ಮನೆಯಿಂದ ಹೊರಟವನು ನಾಪತ್ತೆಯಾದ ಘಟನೆ ಜ. 14ರಂದು ಬೆಳಗ್ಗೆ ನಡೆದಿದೆ.

ಬಾಲಕ ಮನೆಗೆ ಬಾರದೆ ಇದ್ದಾಗ ಮನೆಯವರು ಹುಡುಕಾಟ ನಡೆಸಿದಾಗ ತೋಟದ ಕೆರೆಯ ಬಳಿ ಕಂಡು ಬಂದ ರಕ್ತದ ಕಲೆಗಳು ಮನೆಯವರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿದೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯವರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೊಲೀಸ್‌ ಇಲಾಖೆ, ಅಗ್ನಿ ಶಾಮಕ ದಳ ಸ್ಥಳೀಯರು ಸೇರಿದ್ದು ಹುಡುಕಾಟ ನಡೆಸುತ್ತಿದ್ದಾರೆ. ಮಚ್ಚಿನ ಪರಿಸರದಲ್ಲಿ ಚಿರತೆ ಓಡಾಟ ಇರುವುದರಿಂದ ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಹಾಗೂ ಮನೆಯವರಲ್ಲಿ ಆತಂಕ ಸೃಷ್ಟಿಯಾಗಿದೆ.

You may also like