Karave: ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಬೆರಳಣಿಕೆಯ ದಿನಗಳು ಉಳಿದಿದ್ದು, ಟ್ರೋಫಿ ಯಾರು ಗೆಲ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸುದೀಪ್ ನಿವಾಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ಭೇಟಿ ನೀಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೆ ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲು ಕಿಚ್ಚ ಸುದೀಪ್ ಅವರಿಗೆ 25 ಲಕ್ಷ ಪೇಮೆಂಟ್ ಕೊಡಲಾಗಿದೆ ಎಂಬ ವಿಚಾರವೊಂದು ಹರಿದಾಡಿತ್ತು. ಈ ವಿಚಾರವಾಗಿ ಇದೀಗ ಕರವೇ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟನ್ನು ನೀಡಿದ್ದಾರೆ.
ಹೌದು, ಬಿಗ್‌ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಸಹ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಇನ್ನು ಅಶ್ವಿನಿ ಗೌಡ ನಾರಾಯಣ ಗೌಡರ ಶಿಷ್ಯೆ ಎಂದು ಹೇಳಲಾಗುತ್ತಿದೆ. ಇನ್ನು ಫಿನಾಲೆ ಹಂತದಲ್ಲಿರುವ ಸ್ಪರ್ಧಿಗಳಿಗೆ ಮೂರು ಆಸೆಗಳನ್ನು ಕೋರಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಅಶ್ವಿನಿಗೌಡ ಬಿಗ್‌ಬಾಸ್ ಮನೆಯಲ್ಲಿ ನಾರಾಯಣ ಗೌಡರನ್ನು ನೋಡಬೇಕು. ಅವರ ಅಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಈ ಸಮಯದಲ್ಲಿಯೇ ಕಿಚ್ಚ ಸುದೀಪ್ ಅವರನ್ನು ಕರವೇ ನಾರಾಯಣಗೌಡರು ಭೇಟಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬಿಗ್ ಬಾಸ್ ಫಿನಾಲೆ ಹೊತ್ತಲ್ಲಿ ನಾರಾಯಣಗೌಡರು ಸುದೀಪ್ ಅವರನ್ನು ಭೇಟಿಯಾಗಿರುವುದು ಅಶ್ವಿನಿ ಗೌಡ ಅವರನ್ನು ಗೆಲ್ಲಿಸುವ ಸಲುವಾಗಿಯೇ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು.
ಆ ಆರೋಪಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ತಿರುಗೇಟು ನೀಡಿದ್ದು, ‘ಕರವೇ ಅಧ್ಯಕ್ಷರಾದ ನಾರಾಯಣ ಗೌಡ ಅವರು ಮಗನ ಮದುವೆಯ ಕಾರ್ಡ್ ಕೊಡಲು ಸುದೀಪ್ ಮನೆಗೆ ಹೋಗಿದ್ದರು. ಅದನ್ನು ಗಿಲ್ಲಿ ಫ್ಯಾನ್ಸ್ ಈ ರೀತಿ ತಿರುಗಿಸಿ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ಜಗ್ಗಲ್ಲ. ಕರವೇ ಕಾರ್ಯಕರ್ತರೆಲ್ಲ ಅಶ್ವಿನಿ ಗೌಡ ಅವರಿಗೆ ವೋಟ್ ಮಾಡುತ್ತಿದ್ದಾರೆ. ಅಶ್ವಿನಿ ಅವರೇ ಗೆಲ್ಲುವುದು’ ಎಂದು ಕರವೇ ಸದಸ್ಯರು ಹೇಳಿದ್ದಾರೆ. ಜನವರಿ 17 ಮತ್ತು 18ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಫಿನಾಲೆ ನಡೆಯಲಿದೆ.
ಭೇಟಿ ಹಿಂದಿನ ಅಸಲಿ ಸತ್ಯವೇನು?
ನಾರಾಯಣಗೌಡ ಅವರ ಭೇಟಿಯು ಬಿಗ್‌ಬಾಸ್ ಕುರಿತು ಅಲ್ಲವೇ ಅಲ್ಲ, ಈ ಎಲ್ಲ ಚರ್ಚೆಗಳಿಗೆ ಅವರ ಫೋಟೋಗಳೇ ಸ್ಪಷ್ಟನೆ ನೀಡುತ್ತಿವೆ. ನಾರಾಯಣಗೌಡ-ಸುದೀಪ್ ಭೇಟಿಗೆ ಬಿಗ್‌ಬಾಸ್ ಅಥವಾ ಅಶ್ವಿನಿ ಗೌಡ ಅವರ ಸ್ಪರ್ಧೆಗೆ ಯಾವುದೇ ಸಂಬಂಧವೇ ಇಲ್ಲ ಎಂದು ಹೇಳಿವೆ. ಅಸಲಿಗೆ, ನಾರಾಯಣಗೌಡರು ತಮ್ಮ ಕುಟುಂಬದಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರಿಗೆ ಆಮಂತ್ರಣ ನೀಡಲು ತೆರಳಿದ್ದರು ಎಂಬುದು ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ವೈಯಕ್ತಿಕ ಮತ್ತು ಸಾಮಾಜಿಕ ಭೇಟಿಯಾಗಿದ್ದು, ಅದಕ್ಕೆ ಬೇರೆ ಯಾವುದೇ ರಾಜಕೀಯ ಅಥವಾ ಬಿಗ್‌ಬಾಸ್ ಹಿನ್ನೆಲೆ ಇಲ್ಲ ಎನ್ನುವುದು ಖಚಿತವಾಗಿದೆ.
