Home » ನೀಟ್‌ ಪಿಜಿ 2025 ಪ್ರವೇಶ: ಅರ್ಹತಾ ಮಾನದಂಡ ಬದಲು

ನೀಟ್‌ ಪಿಜಿ 2025 ಪ್ರವೇಶ: ಅರ್ಹತಾ ಮಾನದಂಡ ಬದಲು

0 comments

ಹೊಸದಿಲ್ಲಿ: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ಉಳಿದಿದ್ದು, ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) 2025ರ ಪ್ರವೇಶಕ್ಕೆ ಅರ್ಹತಾ ಮಾನದಂಡ ಪರ್ಸೆಂಟೈಲ್ ಅನ್ನು ಪರಿಷ್ಕರಿಸಿದೆ.

ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಪರ್ಸೆಂಟೈಲ್ 40ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಇನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಪರ್ಸೆಂಟೈಲ್ 50ರಿಂದ 7ಕ್ಕೆ ಇಳಿಸಲಾಗಿದೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ಪೂರ್ಣಗೊಂಡ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಬಿಇಎಂಎಸ್ ಹೇಳಿದೆ.

ವೈದ್ಯ ಸೀಟುಗಳನ್ನು ಖಾಲಿ ಬಿಟ್ಟರೆ ಆರೋಗ್ಯ ಸೇವೆ ಸುಧಾರಣೆ ಪ್ರಯತ್ನಗಳು ಫಲ ನೀಡುವುದಿಲ್ಲ. ಹೀಗಾಗಿ, ತಜ್ಞ ವೈದ್ಯರ ಸಂಖ್ಯೆ ಹೆಚ್ಚಿಸಲು ಲಭ್ಯವಿರುವ ಸೀಟುಗಳ ಬಳಕೆಯನ್ನು ಖಚಿತಪಡಿಸಿ ಕೊಳ್ಳುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗಿದೆ ಎನ್ನಲಾಗಿದೆ.

ಸೀಟು ವ್ಯರ್ಥವಾಗುವುದನ್ನು ತಡೆ ಗಟ್ಟುವ ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸುವ ಅಗತ್ಯವನ್ನು ಉಲ್ಲೇಖಿಸಿ ಭಾರತೀಯ ವೈದ್ಯಕೀಯ ಸಂಘವು ಜ.12ರಂದು ಅರ್ಹತಾ ಕಟ್ ಆಫ್ ಅಂಕ ವನ್ನು ಪರಿಷ್ಕರಿಸುವಂತೆ ಮನವಿ ಮಾಡಿತ್ತು

You may also like